ADVERTISEMENT

ಎಂಜಿನಿಯರಿಂಗ್ ವಿದ್ಯಾರ್ಥಿನಿ ಸಾವು: ತನಿಖೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2019, 11:19 IST
Last Updated 21 ಏಪ್ರಿಲ್ 2019, 11:19 IST
ಎಂಜಿನಿಯರಿಂಗ್ ವಿದ್ಯಾರ್ಥಿನಿ ಸಾವಿನ ಪ್ರಕರಣವನ್ನು ತನಿಖೆ ನೀಡಬೇಕು ಎಂದು ಒತ್ತಾಯಿಸಿ ಕೋಲಾರದ ಗಾಂಧಿವನದಲ್ಲಿ ಭಾನುವಾರ ಎಸ್‍ಎಫ್‍ಐ ಮತ್ತು ಜನವಾದಿ ಮಹಿಳಾ ಸಂಘಟನೆ ಸದಸ್ಯರು ಧರಣಿ ನಡೆಸಿದರು.
ಎಂಜಿನಿಯರಿಂಗ್ ವಿದ್ಯಾರ್ಥಿನಿ ಸಾವಿನ ಪ್ರಕರಣವನ್ನು ತನಿಖೆ ನೀಡಬೇಕು ಎಂದು ಒತ್ತಾಯಿಸಿ ಕೋಲಾರದ ಗಾಂಧಿವನದಲ್ಲಿ ಭಾನುವಾರ ಎಸ್‍ಎಫ್‍ಐ ಮತ್ತು ಜನವಾದಿ ಮಹಿಳಾ ಸಂಘಟನೆ ಸದಸ್ಯರು ಧರಣಿ ನಡೆಸಿದರು.   

ಕೋಲಾರ: ಎಂಜಿನಿಯರಿಂಗ್ ವಿದ್ಯಾರ್ಥಿನಿ ಸಾವಿನ ಪ್ರಕರಣವನ್ನು ಸಮಗ್ರ ತನಿಖೆ ನೀಡಬೇಕು ಎಂದು ಒತ್ತಾಯಿಸಿ ನಗರದ ಗಾಂಧಿವನದಲ್ಲಿ ಭಾನುವಾರ ಎಸ್‍ಎಫ್‍ಐ ಮತ್ತು ಜನವಾದಿ ಮಹಿಳಾ ಸಂಘಟನೆ ಸದಸ್ಯರು ಧರಣಿ ನಡೆಸಿದರು.

ಭೀಮಸೇನೆ ರಾಜ್ಯ ಘಟಕದ ಅಧ್ಯಕ್ಷ ಮುನಿವೆಂಕಟಪ್ಪ ಮಾತನಾಡಿ, ‘ರಾಯಚೂರಿನ ಎಂಜಿನಿಯರಿಂಗ್ 5ನೇ ಸೆಮಿಸ್ಟರ್ ವಿದ್ಯಾರ್ಥಿನಿ ಶವ ಹನುಮಪ್ಪ ದೇವಾಲಯ ಹಿಂಭಾಗದ ಹೊಲದಲ್ಲಿ ಸುಟ್ಟು ಕರಕಲಾಗಿ, ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಹತ್ಯೆ ಮಾಡಲಾಗಿದೆ’ ಎಂದು ದೂರಿದರು.

ಮಿದ್ಯಾರ್ಥಿನಿಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೇಲ್ನೋಟಕ್ಕೆ ಹೇಳಲಾಗುತ್ತಿದ್ದು, ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ಹೀಗಾಗಿ ಕೂಡಲೇ ಪ್ರಕರಣವನ್ನು ಸಮಗ್ರ ತನಿಖೆಗೆ ಒಳಪಡಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಸುಟ್ಟು ಕರಕಲಾದ ಸ್ಥಿತಿಯಲ್ಲಿ ದೇಹವನ್ನು ನೇಣಿಗಿರಿಸಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿಕೊಟ್ಟಿದ್ದು, ಸುತ್ತಮುತ್ತಲ ಪ್ರದೇಶದಲ್ಲಿ ಆತಂಕವನ್ನುಂಟು ಮಾಡಿದೆ. ಅಲ್ಲದೆ ವಿದ್ಯಾರ್ಥಿನಿಸಾವು ಆತ್ಮಹತ್ಯೆಯೋ, ಕೊಲೆಯೋ ಎನ್ನುವ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ. ಅಲ್ಲದೆ ವಿದ್ಯಾರ್ಥಿನಿಯಪೋಷಕರು ತಮ್ಮ ಮಗಳನ್ನು ಹತ್ಯೆ ಮಾಡಲಾಗಿದೆ ಎಂದಿದ್ದಾರೆ’ ಎಂದು ಆರೋಪಿಸಿದರು.

‘ಪ್ರೇಮ ಪ್ರಕರಣದಲ್ಲಿ ಆಕೆಯು ಆತ್ಮಹತ್ಯೆ ಮಾಡಿಕೊಂಡಿರಬಹುದು. ಮತ್ತೊಂದೆಡೆ ಆಕೆಯ ಡೆತ್‌ನೋಟ್ ಪ್ರಕಾರ ಅಭ್ಯಾಸದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಸಾಧನೆ ಮಾಡದಿರುವುದಕ್ಕೆ ಬೇಸರಗೊಂಡು ಈ ರೀತಿ ಘಟನೆಗೆ ಒಳಗಾಗಿರಬಹುದು ಎಂದು ಹೇಳಲಾಗುತ್ತಿದೆ. ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನ ನಡೆಲಲಾಗುತ್ತಿದೆ’ ಎಂದರು.

‘ಪ್ರಕರಣದಿಂದಾಗಿ ಕಾಲೇಜಿನ ವಿದ್ಯಾರ್ಥಿಗಳು, ಸಾರ್ವಜನಿಕರು ಆತಂಕಕ್ಕೆ ಗುರಿಯಾಗಿದ್ದು, ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಸಮಗ್ರ ತನಿಖೆ ಕೈಗೊಳ್ಳುವ ಮೂಲಕ ಎಲ್ಲ ಅನುಮಾನಗಳಿಗೂ ತೆರೆ ಎಳೆಯಬೇಕು’ ಎಂದು ಆಗ್ರಹಿಸಿದರು.

ಎಸ್‍ಎಫ್‍ಐ ಜಿಲ್ಲಾ ಘಟಕದ ಉಪಾಧ್ಯಕ್ಷೆ ಆರ್.ಎನ್.ಗಾಯಿತ್ರಿ, ಕಾರ್ಯದರ್ಶಿ ಶಿವಪ್ಪ, ಸಹ ಕಾರ್ಯದರ್ಶಿಗಳಾದ ಶ್ರೀಕಾಂತ್, ಬೀರಾಜು, ಜಿಲ್ಲಾ ಘಟಕದ ಸಮಿತಿ ಸದಸ್ಯರಾದ ವೇಗಶ್ರೀ, ಅಂಕಿತಾ, ಜೆಎಂಎಸ್ ಮುಖಂಡರಾದ ಮಂಜುಳಾ, ಸುಜಾತಾ, ವಿನುತಾ, ರೂಪಾ, ಅನುಷಾ, ಗಾಯಿತ್ರಿ, ಕುಸುಮಾ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.