
ಬೇತಮಂಗಲ: ಹೋಬಳಿ ಸಮೀಪದ ದೊಡ್ಡಕಾರಿ ಗ್ರಾಮದಲ್ಲಿ ಬುಧವಾರ ರಾತ್ರಿ ಬೀದಿ ನಾಯಿಗಳ ದಾಳಿಯಿಂದ 35 ಕುರಿಗಳು ಮೃತಪಟ್ಟಿವೆ.
ದೊಡ್ಡಕಾರಿಯ ಸೀನಪ್ಪ ಎಂಬುವವರು ಶೆಡ್‌ನಲ್ಲಿ ಕುರಿಗಳನ್ನು ಹಾಕಿ ರಾತ್ರಿ ಊಟಕ್ಕೆ ಹೋದ ಸಂದರ್ಭದಲ್ಲಿ ಬೀದಿ ನಾಯಿಗಳ ಗುಂಪು ದಾಳಿ ನಡೆಸಿದೆ. ದಾಳಿಯಲ್ಲಿ 35 ಕುರಿಗಳು ಸಾವನ್ನಪ್ಪಿವೆ. ಇನ್ನೂ ಕೆಲವು ಕುರಿಗಳು ಗಾಯಗೊಂಡಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
ಕುರಿಗಳನ್ನೇ ನಂಬಿ ಜೀವನ ನಡೆಸುತ್ತಿದ್ದ ಸೀನಪ್ಪ ಅವರಿಗೆ ಇದರಿಂದ ₹2 ಲಕ್ಷಕ್ಕೂ ಅಧಿಕ ನಷ್ಟವುಂಟಾಗಿದೆ.
ಪಶು ವೈದ್ಯಕೀಯ ಇಲಾಖೆ ಅಧಿಕಾರಿ ತ್ರಿಮೂರ್ತಿ ನಾಯಕ್ ಸ್ಥಳಕ್ಕೆ ಭೇಟಿ ಕುರಿಗಳ ಮರಣೋತ್ತರ ಪರೀಕ್ಷೆ ನಡೆಸಿ ಪರಿಹಾರ ನೀಡುವ ಭರವಸೆ ನೀಡಿದರು.
‘ಬೀದಿ ನಾಯಿಗಳ ಹಾವಳಿಯಿಂದ 35 ಕುರಿ ಕಳೆದುಕೊಂಡಿದ್ದೇನೆ. ಇದರಿಂದ ಜೀವನ ಕಟ್ಟಿಕೊಂಡಿದ್ದ ನನಗೆ ದಿಕ್ಕು ತೋಚದಂತಾಗಿದೆ’ ಎಂದು ಕುರಿಗಾಹಿ ಸೀನಪ್ಪ ಕಣ್ಣೀರು ಹಾಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.