ADVERTISEMENT

ಶಿವಾರ ಪಟ್ಟಣ ಸರ್ಕಾರಿ ಪ್ರೌಢಶಾಲೆಯ ಹಳೆ ವಿದ್ಯಾರ್ಥಿಗಳ ಸ್ನೇಹ ಕೂಟ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2026, 3:15 IST
Last Updated 23 ಫೆಬ್ರುವರಿ 2026, 3:15 IST
ಮಾಲೂರು ತಾಲ್ಲೂಕಿನ ಶಿವಾರ ಪಟ್ಟಣ ಸರ್ಕಾರಿ ಪ್ರೌಢಶಾಲೆ 1979-1982ನೇ ಸಾಲಿನ ಹಳೆಯ ವಿದ್ಯಾರ್ಥಿಗಳ ಸ್ನೇಹ ಕೂಟವು ಷಾಪುರು ಗ್ರಾಮದ ತೋಟದಲ್ಲಿ ಭಾನುವಾರ ನಡೆಯಿತು 
ಮಾಲೂರು ತಾಲ್ಲೂಕಿನ ಶಿವಾರ ಪಟ್ಟಣ ಸರ್ಕಾರಿ ಪ್ರೌಢಶಾಲೆ 1979-1982ನೇ ಸಾಲಿನ ಹಳೆಯ ವಿದ್ಯಾರ್ಥಿಗಳ ಸ್ನೇಹ ಕೂಟವು ಷಾಪುರು ಗ್ರಾಮದ ತೋಟದಲ್ಲಿ ಭಾನುವಾರ ನಡೆಯಿತು    

ಮಾಲೂರು: ತಾಲ್ಲೂಕಿನ ಶಿವಾರ ಪಟ್ಟಣ ಸರ್ಕಾರಿ ಪ್ರೌಢಶಾಲೆಯ 1979-1982ನೇ ಸಾಲಿನ ಹಳೆಯ ವಿದ್ಯಾರ್ಥಿಗಳ ಸ್ನೇಹ ಕೂಟ ಕಾರ್ಯಕ್ರಮ ಷಾಪುರು ಗ್ರಾಮದ ತೋಟದಲ್ಲಿ ಭಾನುವಾರ ನಡೆಯಿತು.

ಈ ವೇಳೆ ಸ್ನೇಹ ಸಮ್ಮಿಲನ ಕೂಟದ ಅಧ್ಯಕ್ಷ ಶೇಕ್ ಅಹಮದ್ ಮಾತನಾಡಿ, ಸ್ನೇಹವೆಂದರೆ ನಂಬಿಕೆ, ಪ್ರೀತಿ ಮತ್ತು ನಿಷ್ಕಲ್ಮಶ ಬಂಧನ. ಕಷ್ಟದಲ್ಲಿದ್ದಾಗ ಜೊತೆಯಾಗಿ ನಿಲ್ಲುವ, ನಗುವಿನಲ್ಲಿ ಭಾಗಿಯಾಗುವ ಗೆಳೆಯರೇ ನಿಜವಾದ ಆಸ್ತಿ ಎಂದರು.

ಕಾರ್ಯಕ್ರಮದಲ್ಲಿ 40 ವರ್ಷಗಳ ಹಿಂದಿನ ಹಳೆಯ ನೆನಪುಗಳನ್ನು ಮೆಲಕು ಹಾಕಿದರು. ಹಳೆಯ ವಿದ್ಯಾರ್ಥಿಗಳ ಕುಟುಂಬದವರು ಭಾಗವಹಿಸಿದ್ದರು.

ADVERTISEMENT

ಸ್ನೇಹ ಸಮ್ಮಿಲನ ಕೂಟದ ಪ್ರಧಾನ ಕಾರ್ಯದರ್ಶಿ ಆರ್.ಎನ್.ನಾಗರಾಜ, ಉಪಾಧ್ಯಕ್ಷ ಚಂದ್ರಾರೆಡ್ಡಿ, ಕೆ.ಟಿ.ಶ್ರೀನಿವಾಸ ಚಾರಿ, ನಿರ್ದೇಶಕರಾದ ಶ್ರೀನಿವಾಸ್ ಗೌಡ, ಬೆಮಲ್ ಮಂಜುನಾಥ್, ಯಶೋಧಮ್ಮ, ಲಲಿತಾಂಬ, ಎ.ಸಿ.ರತ್ನಮ್ಮ, ಶಂಕರ್ ಆರ್, ಪ್ರಭಾಕರ್ ರೆಡ್ಡಿ, ರಾಮಕೃಷ್ಣಪ್ಪ, ವೆಂಕಟೇಶ್, ಗಾಯಿತ್ರಮ್ಮ, ವಿಶಾಲಕ್ಷಿ, ಲಕ್ಷ್ಮಿ ಸೇರಿದಂತೆ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.