ADVERTISEMENT

ಕೋಲಾರ: ಟೊಮೆಟೊ ಕೆ.ಜಿಗೆ ₹60

​ಪ್ರಜಾವಾಣಿ ವಾರ್ತೆ
Published 2 ಜನವರಿ 2026, 19:18 IST
Last Updated 2 ಜನವರಿ 2026, 19:18 IST
ಕೋಲಾರ ಎಂಪಿಎಂಸಿ ಮಾರುಕಟ್ಟೆಯಲ್ಲಿ ಟೊಮೆಟೊ ಹರಾಜು
ಕೋಲಾರ ಎಂಪಿಎಂಸಿ ಮಾರುಕಟ್ಟೆಯಲ್ಲಿ ಟೊಮೆಟೊ ಹರಾಜು   

ಕೋಲಾರ: ಹೊಸ ವರ್ಷದಲ್ಲಿ ಟೊಮೆಟೊ ಧಾರಣೆ ಏರುಗತಿಯಲ್ಲಿ ಸಾಗಿದೆ. ಕೋಲಾರ ಎಪಿಎಂಸಿ ಮಾರುಕಟ್ಟೆ ಹರಾಜಿನಲ್ಲಿ 15 ಕೆ.ಜಿ.ತೂಕದ ಬಾಕ್ಸ್‌ ಟೊಮೆಟೊ ₹850ರವರೆಗೆ ಮಾರಾಟವಾಗುತ್ತಿದೆ.
ಸ್ಥಳೀಯ ಚಿಲ್ಲರೆ ಮಾರುಕಟ್ಟೆಯಲ್ಲೂ ಕೆ.ಜಿಗೆ ₹60 ದರದಲ್ಲಿ ಮಾರಾಟ ಆಗುತ್ತಿದೆ.

ಇತ್ತೀಚಿನ ತಿಂಗಳಲ್ಲಿ ಒಂದು ಕ್ರೇಟ್‌ ₹850ಕ್ಕೆ ಮಾರಾಟವಾಗಿರುವುದು ಇದೇ ಮೊದಲು. ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮೆಟೊ ಆವಕ ಪ್ರಮಾಣ 8 ಸಾವಿರ ಕ್ವಿಂಟಲ್‌ (ಸುಮಾರು 54 ಸಾವಿರ ಬಾಕ್ಸ್‌) ಇತ್ತು.

ಪ್ರಮುಖವಾಗಿ ತಮಿಳುನಾಡಿನಿಂದ ಹೆಚ್ಚಿನ ಬೇಡಿಕೆ ಬರುತ್ತಿದೆ. ಅಲ್ಲಿಂದ ವರ್ತಕರು ಬಂದು ಲಾರಿಯಲ್ಲಿ ಟೊಮೆಟೊ ಒಯ್ಯುತ್ತಿದ್ದಾರೆ. ಒಡಿಶಾ, ಜಾರ್ಖಂಡ್‌, ಪಶ್ಚಿಮ ಬಂಗಾಳ, ಬಿಹಾರದಿಂದಲೂ ಬೇಡಿಕೆ ಬರುತ್ತಿದೆ.

ADVERTISEMENT
ಟೊಮೆಟೊ ಧಾರಣೆ ಮತ್ತೆ ಏರಿಕೆ ಕಾಣುತ್ತಿದೆ. ಜಿಲ್ಲೆಯಲ್ಲಿ ಟೊಮೆಟೊ ಫಸಲು ಕಡಿಮೆ ಇದ್ದರೂ ಹೊರ ಜಿಲ್ಲೆಗಳಿಂದ ಬರುತ್ತಿದ್ದು, ವಹಿವಾಟು ಚೆನ್ನಾಗಿ ನಡೆಯುತ್ತಿದೆ
ಕಿರಣ್‌, ಎಪಿಎಂಸಿ ಕಾರ್ಯದರ್ಶಿ, ಕೋಲಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.