ADVERTISEMENT

ಬಂಗಾರಪೇಟೆ: ರಾಗಿ ಖರೀದಿಗೆ ಬಯೋಮೆಟ್ರಿಕ್

ಸರ್ಕಾರ ನಿಗದಿಪಡಿಸಿದ ಖರೀದಿ ಕೇಂದ್ರಗಳಲ್ಲೇ ಮಾರಾಟ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2026, 6:06 IST
Last Updated 3 ಫೆಬ್ರುವರಿ 2026, 6:06 IST
ಬಂಗಾರಪೇಟೆ ಹೊರವಲಯದ ಕೆ.ಎಫ್‌.ಸಿ.ಎಸ್‌.ಸಿ ಗೋದಾಮಿನಲ್ಲಿ 2025-26ನೇ ಸಾಲಿನ ರಾಗಿ ಖರೀದಿ ಕೇಂದ್ರಕ್ಕೆ ಉಪನಿರ್ದೇಶಕ ಟಿ.ಎಂ.ಮಲ್ಲಿಕಾರ್ಜುನ ಚಾಲನೆ ಮಾತನಾಡಿದರು
ಬಂಗಾರಪೇಟೆ ಹೊರವಲಯದ ಕೆ.ಎಫ್‌.ಸಿ.ಎಸ್‌.ಸಿ ಗೋದಾಮಿನಲ್ಲಿ 2025-26ನೇ ಸಾಲಿನ ರಾಗಿ ಖರೀದಿ ಕೇಂದ್ರಕ್ಕೆ ಉಪನಿರ್ದೇಶಕ ಟಿ.ಎಂ.ಮಲ್ಲಿಕಾರ್ಜುನ ಚಾಲನೆ ಮಾತನಾಡಿದರು   

ಬಂಗಾರಪೇಟೆ: ರೈತರು ಹಗಲು ರಾತ್ರಿ ಕಷ್ಟಪಟ್ಟು ರಾಗಿ ಬೆಳೆಯುತ್ತಾರೆ. ಆದರೆ, ಯಾವುದೋ ತುರ್ತು ಕಾರಣಕ್ಕೆ ನಿಗದಿತ ಬೆಲೆಗಿಂತ ಕಡಿಮೆ ಬೆಲೆಗೆ ಮಧ್ಯವರ್ತಿಗಳಿಗೆ ಮಾರಿ ಮೋಸ ಹೋಗಬೇಡಿ. ಸರ್ಕಾರ ನಿಗದಿಪಡಿಸಿದ ಖರೀದಿ ಕೇಂದ್ರಗಳಲ್ಲೇ ರಾಗಿ ಮಾರಾಟ ಮಾಡಿ ಸರಿಯಾದ ಲಾಭ ಪಡೆಯಬೇಕೆಂದು ಉಪನಿರ್ದೇಶಕ ಟಿ.ಎಂ.ಮಲ್ಲಿಕಾರ್ಜುನ ಹೇಳಿದರು.

ನಗರದ ಹೊರವಲಯದಲ್ಲಿರುವ ಕೆ.ಎಫ್‌.ಸಿ.ಎಸ್‌.ಸಿ ಗೋದಾಮಿನಲ್ಲಿ 2025-26ನೇ ಸಾಲಿನ ರಾಗಿ ಖರೀದಿ ಕೇಂದ್ರಕ್ಕೆ ಶನಿವಾರ ಚಾಲನೆ ಮಾತನಾಡಿದರು. ‌

ಪ್ರತಿ ವರ್ಷದಿಂದ ವರ್ಷಕ್ಕೆ ಬೆಂಬಲ ಬೆಲೆ ಏರಿಕೆಯಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಪ್ರತಿ ಕ್ವಿಂಟಲ್ ರಾಗಿಗೆ ₹4,290 ನಿಗದಿಪಡಿಸಲಾಗಿದೆ. ರಾಗಿ ಖರೀದಿಸಿದ 15 ದಿನದೊಳಗೆ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮೆಯಾಗಲಿದೆ. ರೈತರು ತಾವು ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ಪಡೆಯುವ ಮೂಲಕ ಆರ್ಥಿಕವಾಗಿ ಮುಂದುವರಿಯಬೇಕು ಎಂಬುದು ಸರ್ಕಾರದ ಗುರಿಯಾಗಿದೆ. ರಾಗಿ ಖರೀದಿ ಪ್ರಕ್ರಿಯೆಯಲ್ಲಿ ಮಧ್ಯವರ್ತಿಗಳ ಹಸ್ತಕ್ಷೇಪ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ರೈತರು ನೇರವಾಗಿ ನೋಂದಾಯಿತ ಕೇಂದ್ರಗಳಿಗೆ ತಮ್ಮ ಬೆಳೆ ತರುವಂತೆ ಸೂಚಿಸಲಾಗಿದೆ ಮತ್ತು ನಿಗದಿತ ಗುಣಮಟ್ಟದ ರಾಗಿ ತರುವ ಮೂಲಕ ರೈತರು ಸುಲಭವಾಗಿ ವ್ಯವಹಾರ ಮುಗಿಸಬಹುದು ಎಂದರು.

ADVERTISEMENT

ಸರ್ಕಾರ ರೈತರಿಂದ ಹೆಚ್ಚುವರಿ ರಾಗಿ ಉತ್ತಮ ಬೆಲೆಗೆ ಖರೀದಿಸುತ್ತಿರುವುದು ಒಂದೆಡೆಯಾದರೆ ಅದನ್ನು ಜನರು ತಮ್ಮ ಆಹಾರದ ಅವಿಭಾಜ್ಯ ಅಂಗವಾಗಿಸಿಕೊಳ್ಳುವುದು ಮತ್ತೊಂದೆಡೆ ಅಷ್ಟೇ. ರಾಗಿ ಅತ್ಯಂತ ಪೌಷ್ಟಿಕಾಂಶಯುಕ್ತ ಆಹಾರವಾಗಿದೆ. ಇತ್ತೀಚಿನ ದಿನಗಳಲ್ಲಿ ಶ್ರೀಮಂತ ವರ್ಗದವರೂ ಸಹ ರಾಗಿ ಮಹತ್ವ ಅರಿತು ಬಳಸುತ್ತಿದ್ದಾರೆ. ಮುಖ್ಯವಾಗಿ ಕೇವಲ ಗ್ರಾಮೀಣ ಭಾಗದವರಷ್ಟೇ ಅಲ್ಲದೆ ಶ್ರೀಮಂತ ವರ್ಗದವರು ಸಹ ತಮ್ಮ ಮಕ್ಕಳಿಗೆ ರಾಗಿ ಸರಿ, ರಾಗಿ ಹಿಟ್ಟು ಮತ್ತು ರಾಗಿ ಗಂಜಿ ನೀಡುತ್ತಿದ್ದಾರೆ. ಇದು ಮಕ್ಕಳ ಸದೃಢ ಬೆಳವಣಿಗೆಗೆ ಅತ್ಯಗತ್ಯ ಎಂಬುದು ಈಗ ಎಲ್ಲರಿಗೂ ಮನವರಿಕೆಯಾಗಿದೆ ಎಂದು ತಿಳಿಸಿದರು.

ಕೆ.ಎಫ್‌.ಸಿ.ಎಸ್‌.ಸಿ ಜಿಲ್ಲಾ ವ್ಯವಸ್ಥಾಪಕ ಎಸ್‌.ಪ್ರಸಾದ್‌ ಮಾತನಾಡಿದರು. ಜನವರಿ 1ರಿಂದ ಮಾರ್ಚ್ 31 ರವರೆಗೆ ರಾಗಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಒಟ್ಟು 8ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿಸುವ ಗುರಿ ಹೊಂದಲಾಗಿದೆ. ಇದೇ ಮೊದಲ ಬಾರಿಗೆ ಖರೀದಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆಗಾಗಿ ಬಯೋಮೆಟ್ರಿಕ್ (ಹೆಬ್ಬೆಟ್ಟಿನ ಗುರುತು) ವ್ಯವಸ್ಥೆ ಜಾರಿಗೆ ತರಲಾಗಿದೆ. ಬಂಗಾರಪೇಟೆ ತಾಲ್ಲೂಕಿನಲ್ಲಿ ಈಗಾಗಲೇ 2755ಕ್ಕೂ ಹೆಚ್ಚು ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಅಂದಾಜು 50 ಸಾವಿರ ಕ್ವಿಂಟಲ್ ರಾಗಿ ಸಂಗ್ರಹವಾಗುವ ನಿರೀಕ್ಷೆಯಿದೆ ಎಂದು ತಿಳಿಸಿದರು.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಶಿರಸ್ತೇದಾರ ಸಿ.ಸುಬ್ರಮಣಿ, ಆಹಾರ ನಿರೀಕ್ಷಕ ರಘುರಾಮ್ ಸಿಂಗ್, ಉಪ ವ್ಯವಸ್ಥಾಪಕ ಮನೋಗರನ್, ಸರ್ಕಾರಿ ನ್ಯಾಯಬೆಲೆ ಅಂಗಡಿ ಪಡಿತರ ವಿತರಕರ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ್, ತಾಲ್ಲೂಕು ಅಧ್ಯಕ್ಷ ದೊಡ್ರಹಳ್ಳಿ ಗೋವಿಂದಪ್ಪ, ಕಣಿಂಬೆಲೆ ಶ್ರೀನಿವಾಸ್, ಎಂ.ಸಿ.ಮಂಜುನಾಥ್,ಸುಹೇಲ್ ಭಾಗವಹಿಸಿದ್ದರು.

ರೈತರು ಹಗಲು ರಾತ್ರಿ ಕಷ್ಟಪಟ್ಟು ರಾಗಿ ಬೆಳೆಯುತ್ತಾರೆ. ಆದರೆ ಯಾವುದೋ ತುರ್ತು ಕಾರಣಕ್ಕೆ ನಿಗದಿತ ಬೆಲೆಗಿಂತ ಕಡಿಮೆ ಬೆಲೆಗೆ ಮಧ್ಯವರ್ತಿಗಳಿಗೆ ಮಾರಿ ಮೋಸ ಹೋಗಬೇಡಿ. ಸರ್ಕಾರ ನಿಗದಿಪಡಿಸಿದ ಖರೀದಿ ಕೇಂದ್ರಗಳಲ್ಲೇ ರಾಗಿ ಮಾರಾಟ ಮಾಡಿ ಸರಿಯಾದ ಲಾಭ ಪಡೆಯಬೇಕು ಎಂದು ಉಪನಿರ್ದೇಶಕರ ಟಿ.ಎಂ. ಮಲ್ಲಿಕಾರ್ಜುನ ಹೇಳಿದರು.

ನಗರದ ಹೊರವಲಯದಲ್ಲಿರುವ ಕೆ.ಎಫ್‌.ಸಿ.ಎಸ್‌.ಸಿ ಗೋದಾಮಿನಲ್ಲಿ 2025-26ನೇ ಸಾಲಿನ ರಾಗಿ ಖರೀದಿ ಕೇಂದ್ರಕ್ಕೆ ಶನಿವಾರ ಚಾಲನೆ ಮಾತನಾಡಿದರು ಪ್ರತಿ ವರ್ಷದಿಂದ ವರ್ಷಕ್ಕೆ ಬೆಂಬಲ ಬೆಲೆ ಏರಿಕೆಯಾಗುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ಪ್ರತಿ ಕ್ವಿಂಟಾಲ್ ರಾಗಿಗೆ 4,290 ರೂಪಾಯಿಗಳನ್ನು ನಿಗದಿಪಡಿಸಲಾಗಿದೆ. ರಾಗಿ ಖರೀದಿಸಿದ 15 ದಿನದೊಳಗೆ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮೆಯಾಗಲಿದ್ದು,ರೈತರು ತಾವು ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ಪಡೆಯುವ ಮೂಲಕ ಆರ್ಥಿಕವಾಗಿ ಮುಂದುವರೆಯಬೇಕು ಎಂಬುದು ಸರ್ಕಾರದ ಗುರಿಯಾಗಿದೆ,ರಾಗಿ ಖರೀದಿ ಪ್ರಕ್ರಿಯೆಯಲ್ಲಿ ಮಧ್ಯವರ್ತಿಗಳ ಹಸ್ತಕ್ಷೇಪವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ರೈತರು ನೇರವಾಗಿ ನೋಂದಾಯಿತ ಕೇಂದ್ರಗಳಿಗೆ ತಮ್ಮ ಬೆಳೆ ತರುವಂತೆ ಸೂಚಿಸಲಾಗಿದೆ ಮತ್ತು ನಿಗದಿತ ಗುಣಮಟ್ಟದ ರಾಗಿಯನ್ನು ತರುವ ಮೂಲಕ ರೈತರು ಸುಲಭವಾಗಿ ವ್ಯವಹಾರ ಮುಗಿಸಬಹುದು.

ಸರ್ಕಾರವು ರೈತರಿಂದ ಹೆಚ್ಚುವರಿ ರಾಗಿಯನ್ನು ಉತ್ತಮ ಬೆಲೆಗೆ ಖರೀದಿಸುತ್ತಿರುವುದು ಒಂದೆಡೆಯಾದರೆ, ಅದನ್ನು ಜನರು ತಮ್ಮ ಆಹಾರದ ಅವಿಭಾಜ್ಯ ಅಂಗವಾಗಿಸಿಕೊಳ್ಳುವುದು ಮತ್ತೊಂದೆಡೆ ಅಷ್ಟೇ ರಾಗಿ ಅತ್ಯಂತ ಪೌಷ್ಟಿಕಾಂಶಯುಕ್ತ ಆಹಾರವಾಗಿದ್ದು, ಆರೋಗ್ಯಕ್ಕೆ ಪೂರಕವಾಗಿದೆ. ಇತ್ತೀಚಿನ ದಿನಗಳಲ್ಲಿ ಶ್ರೀಮಂತ ವರ್ಗದವರೂ ಸಹ ರಾಗಿಯ ಮಹತ್ವ ಅರಿತು ಬಳಸುತ್ತಿದ್ದಾರೆ ಮುಖ್ಯವಾಗಿದೆ,ಕೇವಲ ಗ್ರಾಮೀಣ ಭಾಗದವರಷ್ಟೇ ಅಲ್ಲದೆ, ಶ್ರೀಮಂತ ವರ್ಗದವರು ಸಹ ತಮ್ಮ ಮಕ್ಕಳಿಗೆ ರಾಗಿ ಸರಿ, ರಾಗಿ ಹಿಟ್ಟು ಮತ್ತು ರಾಗಿ ಗಂಜಿಯನ್ನು ನೀಡುತ್ತಿದ್ದಾರೆ. ಇದು ಮಕ್ಕಳ ಸದೃಢ ಬೆಳವಣಿಗೆಗೆ ಅತ್ಯಗತ್ಯ ಎಂಬುದು ಈಗ ಎಲ್ಲರಿಗೂ ಮನವರಿಕೆಯಾಗಿದೆ ಎಂದು ತಿಳಿಸಿದರು.

ಕೆ.ಎಫ್‌.ಸಿ.ಎಸ್‌.ಸಿ ಜಿಲ್ಲಾ ವ್ಯವಸ್ಥಾಪಕ ಎಸ್‌. ಪ್ರಸಾದ್‌ ಮಾತನಾಡಿದರು ಜನವರಿ 1 ರಿಂದ ಮಾರ್ಚ್ 31 ರವರೆಗೆ ರಾಗಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ.ಪ್ರಸಕ್ತ ಸಾಲಿನಲ್ಲಿ ಒಟ್ಟು 8 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿಸುವ ಗುರಿ ಹೊಂದಲಾಗಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಖರೀದಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆಗಾಗಿ ಬಯೋಮೆಟ್ರಿಕ್ (ಹೆಬ್ಬೆಟ್ಟಿನ ಗುರುತು) ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಬಂಗಾರಪೇಟೆ ತಾಲೂಕಿನಲ್ಲಿ ಈಗಾಗಲೇ 2755 ಕ್ಕೂ ಹೆಚ್ಚು ರೈತರು ನೋಂದಣಿ ಮಾಡಿಕೊಂಡಿದ್ದು, ಅಂದಾಜು 50 ಸಾವಿರ ಕ್ವಿಂಟಾಲ್ ರಾಗಿ ಸಂಗ್ರಹವಾಗುವ ನಿರೀಕ್ಷೆಯಿದೆ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಶಿರಸ್ತೇದಾರ್ ಸಿ. ಸುಬ್ರಮಣಿ ಆಹಾರ ನಿರೀಕ್ಷಕಕೆ ರಘುರಾಮ್ ಸಿಂಗ್,ಉಪವ್ಯವಸ್ಥಾಪಕ ಮನೋಗರನ್ ,ಸರ್ಕಾರಿ ನ್ಯಾಯಬೆಲೆ ಅಂಗಡಿ ಪಡಿತರ ವಿತರಕರ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ್, ತಾಲ್ಲೂಕು ಅಧ್ಯಕ್ಷ ದೊಡ್ರಹಳ್ಳಿ ಗೋವಿಂದಪ್ಪ, ಕಣಿಂಬೆಲೆ ಶ್ರೀನಿವಾಸ್,ಎಂ.ಸಿ. ಮಂಜುನಾಥ್ ,ಸುಹೇಲ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.