
ಪ್ರಜಾವಾಣಿ ವಾರ್ತೆ
ಕಾಡಾನೆ ಹಿಂಡು
ಬಂಗಾರಪೇಟೆ: ತಾಲ್ಲೂಕಿನ ಗಡಿ ಗ್ರಾಮಗಳಲ್ಲಿ ಮತ್ತೆ ಕಾಡಾನೆ ಹಿಂಡು ಪ್ರತ್ಯಕ್ಷವಾಗಿದ್ದು, ಈ ಭಾಗದ ರೈತರಲ್ಲಿ ಆತಂಕ ಶುರುವಾಗಿದೆ.
ತಮಿಳುನಾಡಿನಿಂದ ಬಂದು ತಾಲ್ಲೂಕಿನ ಕನಮನಹಳ್ಳಿ ಸುತ್ತಮುತ್ತ ಬೀಡು ಬಿಟ್ಟಿರುವ ಕಾಡಾನೆ ಹಿಂಡು ಈ ಭಾಗದ ಜನರಲ್ಲಿ ನಿದ್ದೆಗೆಡಿಸಿದೆ. ಕನುಮನಹಳ್ಳಿ ಗ್ರಾಮದ ಪುನ್ನೋಜಿ ರಾವ್ ಎಂಬುವರ ಟೊಮೆಟೊ ಹಾಗೂ ಭತ್ತದ ಬೆಳೆಯನ್ನ ತುಳಿದು ನಾಶ ಮಾಡಿವೆ. ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಬೆಳೆದಿದ್ದ ವಿವಿಧ ಬೆಳೆ ನಾಶವಾಗಿವೆ.
ಕಾಡಾನೆಗಳನ್ನು ನಿಯಂತ್ರಣ ಮಾಡುವಂತೆ ಸ್ಥಳೀಯ ನಿವಾಸಿಗಳು ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ. ಆನೆಗಳನ್ನ ಹಿಮ್ಮೆಟ್ಟಿಸುವಂತೆ ಒತ್ತಾಯಿಸಿದ್ದಾರೆ.