ADVERTISEMENT

ಮಾಲೂರು | ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ಮೇಳ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2025, 7:03 IST
Last Updated 15 ಸೆಪ್ಟೆಂಬರ್ 2025, 7:03 IST
ಮಾಲೂರಿನಲ್ಲಿ ಕೆನರಾ ಬ್ಯಾಂಕ್  ಹಮ್ಮಿಕೊಂಡಿದ್ದ ಸಾಲ ಮೇಳ ಮತ್ತು ಆರ್ಥಿಕ ಜಾಗೃತಿ ಕಾರ್ಯಕ್ರಮಕ್ಕೆ ಸ್ವಸಹಾಯ ಗುಂಪುಗಳ ಸದಸ್ಯರು ಚಾಲನೆ ನೀಡಿದರು. 
ಮಾಲೂರಿನಲ್ಲಿ ಕೆನರಾ ಬ್ಯಾಂಕ್  ಹಮ್ಮಿಕೊಂಡಿದ್ದ ಸಾಲ ಮೇಳ ಮತ್ತು ಆರ್ಥಿಕ ಜಾಗೃತಿ ಕಾರ್ಯಕ್ರಮಕ್ಕೆ ಸ್ವಸಹಾಯ ಗುಂಪುಗಳ ಸದಸ್ಯರು ಚಾಲನೆ ನೀಡಿದರು.    

ಮಾಲೂರು: ಕೃಷಿ ಮತ್ತು ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರಿಗೆ ಕೆನರಾ ಬ್ಯಾಂಕ್ ಭಾನುವಾರ ಸಾಲ ಮೇಳ ಮತ್ತು ಆರ್ಥಿಕ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿತ್ತು.

ಬ್ಯಾಂಕ್ ನೀಡುವ ಸಾಲ ಸೌಲಭ್ಯದ ನೆರವು ಪಡೆದು ಅಭಿವೃದ್ಧಿ ಹೊಂದಿದ ಸ್ವಸಹಾಯ ಸಂಘಗಳ ಮಹಿಳಾ ಸದಸ್ಯರು ಇತರ ಮಹಿಳಾ  ಗ್ರಾಹಕರೊಂದಿಗೆ ಅನುಭವ ಹಂಚಿಕೊಂಡರು. 

ಗ್ರಾಮೀಣ ಭಾಗದ ಕೃಷಿ ಮತ್ತು ರೈತರ ಪ್ರಗತಿಗೆ ಬ್ಯಾಂಕ್‌ ಬೆಂಬಲ ನೀಡುವ ಪ್ರಮುಖ ಆರ್ಥಿಕ ಮೂಲವಾಗಿದೆ ಎಂದು ಬ್ಯಾಂಕ್ ಸರ್ಕಲ್ ಮುಖ್ಯಧಿಕಾರಿ ಮಹೇಶ್ ಎಂ.ಪಾಲ್ ತಿಳಿಸಿದರು.

ADVERTISEMENT

ಕೃಷಿ ಮತ್ತು ಮಹಿಳಾ ಸ್ವಸಹಾಯ ಗುಂಪುಗಳಿಗೆ ಸುಮಾರು ₹15 ಕೋಟಿ ಸಾಲ ವಿತರಿಸಲಾಗಿದೆ. ಗ್ರಾಮೀಣ ಭಾಗದಲ್ಲಿ ಹಸು, ಕುರಿ ಸಾಕಾಣಿಕೆಗೆ ಸಾಲ ನೀಡಲಾಗಿದೆ ಎಂದು ಬ್ಯಾಂಕ್ ಪ್ರಾದೇಶಿಕ ಅಧಿಕಾರಿ ಎಂ. ಅಶೋಕ್ ಕುಮಾರ್ ಹೇಳಿದರು.

ಪ್ರಾದೇಶಿಕ ಸಂಯೋಜಕ ಶಂಕರಯ್ಯ, ಶಾಖಾ ಮ್ಯಾನೆಜರ್ಗಳಾದ ಸೌರಭ್‌ ಕುಮಾರ್,ಸುರೇಶ್ ಕುಮಾರ್ ಹಾಗೂ ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.