ಮುನಿರಾಬಾದ್: ತುಂಗಭದ್ರಾ ಜಲಾಶಯದಲ್ಲಿ ಸಂಗ್ರಹವಾಗಿರುವ ಹೂಳನ್ನು ತೆಗೆದು ಹೆಚ್ಚುವರಿ ನೀರು ನಿಲ್ಲಲು ಅನುವಾಗುವಂತೆ ಕ್ರಮಕೈಗೊಳ್ಳಲು ಸರ್ಕಾರವನ್ನು ಆಗ್ರಹಿಸಿ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಸಂಸ್ಥಾಪಕ ಬಿ.ಶ್ರೀರಾಮುಲು ಮುನಿರಾಬಾದ್‌ನಲ್ಲಿ ಭಾನುವಾರದಿಂದ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ್ದಾರೆ.
ಉಪವಾಸ ಸತ್ಯಾಗ್ರಹ ಆರಂಭಕ್ಕೂ ಮುನ್ನ ಭಾನುವಾರ ಬೆಳಿಗ್ಗೆ ಮುನಿರಾಬಾದ್‌ನ ಲೇಕ್‌ವ್ಯೆ ಪ್ರವಾಸಿಮಂದಿರದ ಬಳಿ ಮಂಗಳವಾದ್ಯ ಸಮೇತ ಸಂಪ್ರದಾಯ ಬದ್ಧವಾಗಿ ಗಂಗಾಪೂಜೆಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ರಾಯಚೂರು ಸಂಸದ ಸಣ್ಣಪಕೀರಪ್ಪ, ಬಳ್ಳಾರಿ ಸಂಸದೆ ಜೆ.ಶಾಂತಾ, ಕೂಡ್ಲಿಗಿ ಶಾಸಕ ನಾಗೇಂದ್ರ, ಕಂಪ್ಲಿಶಾಸಕ ಸುರೇಶ್‌ಬಾಬು, ಕೆ.ಎಂ.ಸೈಯದ್ ಕೊಪ್ಪಳ, ಶಿವಪುತ್ರಪ್ಪ ಬೆಲ್ಲದ್, ತಿಪ್ಪಾರೆಡ್ಡಿ, ಚಲನಚಿತ್ರ ನಟಿ ರಕ್ಷಿತಾ, ಅರುಣಾ ತಿಪ್ಪಾರೆಡ್ಡಿ, ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ವಿ.ಮಹಿಪಾಲ್ ರೈತ ಮುಖಂಡರು ಮತ್ತು ಪದಾಧಿಕಾರಿಗಳು ಭಾಗವಹಿಸಿದ್ದರು.
ಹುಲಿಗೆಮ್ಮದೇವಸ್ಥಾನಕ್ಕೆ: ಜಲಾಶಯಕ್ಕೆ ಪೂಜೆ ಸಲ್ಲಿಸಿದ ನಂತರ ನೇರವಾಗಿ ಸಮೀಪದ ಹುಲಿಗಿಯ ಹುಲಿಗೆಮ್ಮದೇವಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.
ಹೊಸ ನಿಂಗಾಪುರದಿಂದ ಅಲಂಕರಿಸಿದ ಎತ್ತಿನ ಬಂಡಿಯಲ್ಲಿ ಪಕ್ಷದ ಮುಖಂಡರ ಜೊತೆ ಮುನಿರಾಬಾದ್ ಹೊರವಲಯದಲ್ಲಿ ನಿರ್ಮಿಸಲಾದ ಬೃಹತ್‌ವೇದಿಕೆಗೆ ಬಂದು ತಲುಪಿದರು.
ಸ್ವಾಗತದ ನಂತರ ಕಲಾವಿದರಿಂದ ಸಂಗೀತ ಸಂಯೋಜಿತ `ಉಳುವಾಯೋಗಿಯ ನೋಡಲ್ಲಿ~ ಎಂಬ ರೈತಗೀತೆಯನ್ನು ಹಾಡಿದ ನಂತರ ಮಾತನಾಡಿದ ಶ್ರೀರಾಮುಲು, ತುಂಗಭದ್ರಾ ಹೂಳಿನಿಂದ ಜಲಾಶಯ ಅಚ್ಚುಕಟ್ಟು ಪ್ರದೇಶದ ರೈತರಿಗಾಗುತ್ತಿರುವ ಬೆಳೆ ನಷ್ಟವನ್ನು ಗಮನಿಸಿ, ರೈತರ ಹಿತದೃಷ್ಟಿಯಿಂದ ಸಮಸ್ಯೆಯ ಬಗ್ಗೆ ಮೂರು ತಿಂಗಳ ಹಿಂದೆಯೇ ಆಗಿನ ಮುಖ್ಯಮಂತ್ರಿಗಳನ್ನು ಒತ್ತಾಯಿಸಿ ಮನವಿಮಾಡಲಾಗಿತ್ತು.
ಆದರೆ ಸಮಸ್ಯೆಯ ಬಗ್ಗೆ ಯಾವುದೇ ಕ್ರಮಕೈಗೊಳ್ಳದ ಸರ್ಕಾರದ ನಿರ್ಲಕ್ಷವನ್ನು ಖಂಡಿಸಿ ಎರಡುದಿನ ಉಪವಾಸ ಸತ್ಯಾಗ್ರಹ ಕೈಗೊಳ್ಳುತ್ತಿರುವುದಾಗಿ ಘೋಷಿಸಿ ಉಪವಾಸ ಪ್ರಾರಂಭಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.