ADVERTISEMENT

ಅಕಾಲಿಕ ಮಳೆಯಿಂದ 10 ಎಕರೆ ಬೆಳೆ ನಷ್ಟ: ಕ್ರಿಮಿನಾಶಕ ಕುಡಿದು ರೈತ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 24 ಮೇ 2022, 4:20 IST
Last Updated 24 ಮೇ 2022, 4:20 IST
ಸಿ.ಎಚ್‌.ಶ್ರೀನಿವಾಸ
ಸಿ.ಎಚ್‌.ಶ್ರೀನಿವಾಸ   

ಕಾರಟಗಿ: ತಾಲ್ಲೂಕಿನ ಬರಗೂರ ಕ್ಯಾಂಪ್‌ನಲ್ಲಿ ಸೋಮವಾರ ಕ್ರಿಮಿನಾಶಕ ಸೇವಿಸಿ ರೈತ ಸಿ.ಎಚ್.ಶ್ರೀನಿವಾಸ (50) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬರಗೂರಕ್ಯಾಂಪ್‌ನ ಸತ್ಯನಾರಾಯಣ ದೇಶಪಾಂಡೆ ಎಂಬುವರಿಗೆ ಸೇರಿದ 10 ಎಕರೆ ಜಮೀನನ್ನು ಗುತ್ತಿಗೆ ಪಡೆದು ಶ್ರೀನಿವಾಸ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದರು. ಈಚೆಗೆ ಸುರಿದ ಅಕಾಲಿಕ ಮಳೆಯಿಂದ ಬೆಳೆ ನಷ್ಟವಾಯಿತು.

ಕೈಗಡ ಸಾಲ ಜೊತೆಗೆ ಶ್ರೀರಾಮನಗರದ ಸಿಂಡಿಕೇಟ್ ಬ್ಯಾಂಕ್‌ ಮತ್ತು ಕೆಎಂಎಫ್‌ ಸಹಕಾರಿ ಬ್ಯಾಂಕ್‌ನಲ್ಲಿ ಸಾಲ ಸೇರಿ ಒಟ್ಟು ₹ 3ಲಕ್ಷ ಸಾಲ ತೀರಿಸಬೇಕಿತ್ತು. ಇದರಿಂದ ನೊಂದು ಜಮೀನಿನ‌ಲ್ಲೇ ಕ್ರಿಮಿನಾಶಕ ಸೇವಿಸಿದರು. ಅಸ್ವಸ್ಥಗೊಂಡ ಅವರನ್ನು ಗಂಗಾವತಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಅವರು ಮಧ್ಯಾಹ್ನ ಸಾವನ್ನಪ್ಪಿದರು ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಸಹೋದರ ಸಿ. ಎಚ್‌. ಗೋಪಿ ನೀಡಿದ ಮಾಹಿತಿಯನ್ವಯ ಕಾರಟಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.