
ಹಣ
ಕೊಪ್ಪಳ: ಜಿಲ್ಲೆಯ ಕುಕನೂರು ತಾಲ್ಲೂಕಿನ ಶಿರೂರಿನ ಶಿಕ್ಷಕ ಭೀಮನಗೌಡ ಎಚ್. ಎಂಬುವವರಿಗೆ ಟೆಲಿಗ್ರಾಂ ಆ್ಯಪ್ ಮೂಲಕ ಪರಿಚಯ ಮಾಡಿಕೊಂಡು ಅಪರಿಚಿತ ವ್ಯಕ್ತಿ ಹೆಚ್ಚು ಆದಾಯದ ಆಮಿಷವೊಡ್ಡಿ ₹16.45 ಲಕ್ಷ ವಂಚನೆ ಮಾಡಿದ್ದಾನೆ.
ಹೋಟೆಲ್‌ಗಳ ರಿವೀವ್ ಹಾಗೂ ರೇಟಿಂಗ್‌ಗಳನ್ನು ನೀಡುತ್ತ ಹೋದರೆ ಅರೆಕಾಲಿಕವಾಗಿ ಆದಾಯ ಗಳಿಸಬಹುದು ಎಂದು ಅಪರಿಚಿತ ವ್ಯಕ್ತಿ ಭೀಮನಗೌಡ ಅವರನ್ನು ನಂಬಿಸಿ ಆ್ಯಪ್ ಮೂಲಕ ಸಲಹೆಗಳನ್ನು ನೀಡುತ್ತ ಬಂದಿದ್ದಾನೆ. ಮೊದಲು ರೇಟಿಂಗ್ ನೀಡಿದ್ದಕ್ಕೆ ನಂಬಿಕೆ ಬರಲಿ ಎನ್ನುವ ಕಾರಣಕ್ಕೆ ₹1022 ಖಾತೆಗೆ ಜಮೆ ಮಾಡಿದ್ದಾನೆ. ಬಳಿಕ ಹಣ ತೊಡಗಿಸಿ ಸವಾಲುಗಳನ್ನು ಗೆಲ್ಲುತ್ತ ಹೋದರೆ ಹೆಚ್ಚಿನ ಹಣ ಸಂಪಾದಿಸಬಹುದು ಎಂದು ನಂಬಿಸಿ ಪಡೆದುಕೊಂಡು ಹಣ ವಾಪಸ್ ಕೊಡದೆ ವಂಚನೆ ಮಾಡಿದ್ದಾನೆ.
2024ರ ಡಿಸೆಂಬರ್ 16ರಿಂದ 2025ರ ಮೇ 6ರ ತನಕದ ಅವಧಿಯಲ್ಲಿ ದೊಡ್ಡಮೊತ್ತವನ್ನು ಅಪರಿಚಿತ ಶಿಕ್ಷಕನ ಖಾತೆಯಿಂದ ವರ್ಗಾವಣೆ ಮಾಡಿಸಿಕೊಂಡಿದ್ದಾನೆ. ಈ ಕುರಿತು ಇಲ್ಲಿನ ಸೈಬರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.