ADVERTISEMENT

ಕೊಪ್ಪಳ | ಶಕ್ತಿ ಯೋಜನೆಗೆ ₹4,500 ಕೋಟಿ: ರಾಮಲಿಂಗಾರೆಡ್ಡಿ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2023, 16:14 IST
Last Updated 19 ಡಿಸೆಂಬರ್ 2023, 16:14 IST
 ರಾಮಲಿಂಗಾರೆಡ್ಡಿ 
 ರಾಮಲಿಂಗಾರೆಡ್ಡಿ    

ಕೊಪ್ಪಳ: ‘ಸಾರಿಗೆ ಬಸ್‌ಗಳಲ್ಲಿ ಮಹಿಳೆಯರ ಉಚಿತ ಪ್ರಯಾಣದ ಶಕ್ತಿ ಯೋಜನೆಗೆ ಒಟ್ಟು ಅನುದಾನವನ್ನು ₹4,500 ಕೋಟಿಗೆ ಹೆಚ್ಚಿಸಲು ಮುಖ್ಯಮಂತ್ರಿ ಒಪ್ಪಿಗೆ ನೀಡಿದ್ದಾರೆ’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಗಂಗಾವತಿ ತಾಲ್ಲೂಕಿನ ಅಂಜನಾದ್ರಿಯಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿ, ‘ಈ ಯೋಜನೆ ಆರಂಭಿಸಿದಾಗ ರಾಜ್ಯದಲ್ಲಿ ನಿತ್ಯ 84 ಲಕ್ಷ ಪ್ರಯಾಣಿಕರು ಬಸ್‌ಗಳಲ್ಲಿ ಸಂಚರಿಸುತ್ತಿದ್ದರು. ಇದರಲ್ಲಿ ಶೇ 50ರಷ್ಟು ಮಹಿಳೆಯರು ಎನ್ನುವ ಸರಾಸರಿ ಲೆಕ್ಕಾಚಾರದಲ್ಲಿ ಈ ಆರ್ಥಿಕ ವರ್ಷದ ಅಂತ್ಯಕ್ಕೆ ₹2,800 ಕೋಟಿ ಮೀಸಲಿಟ್ಟಿದ್ದೆವು. ಈಗ ನಿತ್ಯ ಓಡಾಡುವವರ ಪ್ರಯಾಣಿಕರ ಸಂಖ್ಯೆ ₹1.10 ಕೋಟಿಗೆ ಏರಿಕೆಯಾಗಿದೆ’ ಎಂದು ತಿಳಿಸಿದರು.

‘ಆದ್ದರಿಂದ ಮೊದಲಿನ ಅನುದಾನ ಸಾಕಾಗುತ್ತಿಲ್ಲ. ಜನವರಿಯಲ್ಲಿ ಇನ್ನಷ್ಟು ಅನುದಾನ ನೀಡುವೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಮುಂದಿನ ಬಜೆಟ್‌ನಲ್ಲಿ ಶಕ್ತಿ ಯೋಜನೆಗೆ ಒಟ್ಟು ₹4,500 ಕೋಟಿ ಮೀಸಲಿಡಲಾಗುವುದು’ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.