ಮುನಿರಾಬಾದ್: ಸಮೀಪದ ಅಗಳಕೇರಾ ಗ್ರಾಮದ ಅಂಗನವಾಡಿ ಕೇಂದ್ರದ ಆವರಣದಲ್ಲಿ ಪೋಷಣ ಅಭಿಯಾನ ಅಂಗವಾಗಿ ಈಚೆಗೆ 'ತಾಯಿಯ ಹೆಸರಲ್ಲಿ ಒಂದು ಗಿಡ' ಅಭಿಯಾನ ನಡೆಯಿತು.
ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆಯ ಸಂಯುಕ್ತ ಆಶ್ರಯದಲ್ಲಿ ಅಭಿಯಾನ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ವಲಯ ಅರಣ್ಯ ಅಧಿಕಾರಿ ಎಲ್. ಸ್ವಾತಿ ಮಾತನಾಡಿ, ನಿತ್ಯ ಜೀವನದ ಜತೆ ಗಿಡಮರ ಬೆಳೆಸುವುದು, ಇರುವ ಅರಣ್ಯವನ್ನು ಉಳಿಸಿಕೊಂಡು ಹೋಗುವುದು ಎಲ್ಲರ ಆದ್ಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆಯ ಜತೆ ಕೈಜೋಡಿಸಿರುವ ಗ್ರಾಮದ ಪರಿಸರ ಮಿತ್ರ ಸಂತೋಷ ಕೋರಗಲ್ ಅವರು, ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ ನಡೆದ ಸರಳ ಸಾಮೂಹಿಕ ವಿವಾಹ ಸಂದರ್ಭದಲ್ಲಿ ವಧು– ವರರಿಗೆ ಮತ್ತು ಸಾರ್ವಜನಿಕರಿಗೆ ರಾಷ್ಟ್ರೀಯ ಹಬ್ಬ ಮತ್ತು ವಿಶೇಷ ಸಂದರ್ಭದಲ್ಲಿ ಸಾರ್ವಜನಿಕರು ಮತ್ತು ಶಾಲಾ ಮಕ್ಕಳಿಗೆ ಸಾವಿರಾರು ಸಸಿಗಳನ್ನು ಉಚಿತವಾಗಿ ಹಂಚುವ ಮೂಲಕ ಗಿಡ ಬೆಳೆಸಲು ಪ್ರೇರೇಪಣೆ ನೀಡಿದ್ದಾರೆ. ಅವರ ನಿಸ್ವಾರ್ಥ ಪರಿಸರ ಸೇವೆ ಮತ್ತೊಬ್ಬರಿಗೆ ಮಾದರಿಯಾಗಲಿ ಎಂದರು.
ಅರಣ್ಯ ಇಲಾಖೆಯ ಮಹಾಂತಯ್ಯ, ಅಂಗನವಾಡಿ ಶಿಕ್ಷಕಿ ಶಿವಲೀಲಾ, ಗವಿ ನಾಗಮ್ಮನವರ್, ಸಂತೋಷ ಕೋರಗಲ್, ಮಧು ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.