ADVERTISEMENT

ಆರ್.ಟಿ.ಒ ಕಚೇರಿ ಮೇಲೆ ಎಸಿಬಿ ದಾಳಿ

​ಪ್ರಜಾವಾಣಿ ವಾರ್ತೆ
Published 1 ಜನವರಿ 2020, 10:14 IST
Last Updated 1 ಜನವರಿ 2020, 10:14 IST
ಕೊಪ್ಪಳದ ಆರ್‌ಟಿಒ ಕಚೇರಿಯಲ್ಲಿ ಎಸಿಬಿ ಅಧಿಕಾರಿಗಳು ದಾಖಲೆ ಪರಿಶೀಲಿಸಿದರು
ಕೊಪ್ಪಳದ ಆರ್‌ಟಿಒ ಕಚೇರಿಯಲ್ಲಿ ಎಸಿಬಿ ಅಧಿಕಾರಿಗಳು ದಾಖಲೆ ಪರಿಶೀಲಿಸಿದರು   

ಕೊಪ್ಪಳ: ನಗರದ ಆರ್.ಟಿ.ಒ ಕಚೇರಿ ಮೇಲೆ ಎಸಿಬಿ (ಭ್ರಷ್ಟಾಚಾರ ನಿಗ್ರಹ ದಳ) ಅಧಿಕಾರಿಗಳು ಮಂಗಳವಾರ ದಾಳಿನಡೆಸಿದರು.

ನ್ಯಾಯಾಧೀಶರಿಂದ ಶೋಧನಾ ವಾರೆಂಟ್‌ ಪಡೆದು, ಮಂಗಳವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ದಿಢೀರ್ ದಾಳಿ ನಡೆಸಿದ ಅಧಿಕಾರಿಗಳು ಕಚೇರಿ ಸಿಬ್ಬಂದಿಗಳ ವಿಚಾರಣೆ ನಡೆಸಿದರು. ಆರ್.ಟಿ.ಒ ಕಚೇರಿಯಲ್ಲಿ ಕೆಲ ಶಂಕಿತ ಏಜೆಂಟರು ದೊರಕಿದ್ದು, ಅವರನ್ನು ಸಹ ವಿಚಾರಣೆನಡೆಸಿದ್ದಾರೆ.

ಕೊಪ್ಪಳ ಎಸಿಬಿಯ ಡಿವೈಎಸ್ಪಿ ಆರ್.ಎಸ್.ಉಜ್ಜನಕೊಪ್ಪ, ಬಳ್ಳಾರಿ ಎಸಿಬಿ ಡಿವೈಎಸ್ಪಿ ಚಂದ್ರಕಾಂತ ಪೂಜಾರ ನೇತೃತ್ವದಲ್ಲಿ ದಾಳಿನಡೆದಿದೆ. ಸಂಜೆವರೆಗೂ ತಪಾಸಣೆ ನಡೆದಿದ್ದು, ಸಮಂಜಸ ಕಾರಣ ನೀಡದ ಕಾರಣ 7 ಜನ ಖಾಸಗಿ ಏಜೆಂಟ್‌ಗಳು ಹಾಗೂ 4 ಜನ ಡ್ರೈವಿಂಗ್ ಸ್ಕೂಲ್‌ ಏಜೆಂಟ್‌ಗಳಿಂದ ₹ 1,69, 668 ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಎಸಿಬಿ ಅಧಿಕಾರಿಗಳು ಮಾಹಿತಿ ನೀಡಿದರು.

ADVERTISEMENT

ಎಸಿಬಿ ಇನ್‌ಸ್ಪೆಕ್ಟರ್‌ಗಳಾದ ಎಸ್‌.ಎಸ್‌.ಬೀಳಗಿ, ಗುರುರಾಜ್ ಮೈಲಾರ್‌, ಕೆ.ಪಿ.ರವಿಕುಮಾರ್, ಪಿ.ಎಸ್‌.ಹಿರೇಮಠ ಕಾರ್ಯಾಚರಣೆಯಲ್ಲಿಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.