ADVERTISEMENT

ಸಿಲತ್ ಕ್ರೀಡೆಗೆ ಮಾನ್ಯತೆಗೆ ಕ್ರಮ: ಭರವಸೆ

ಮೂರು ದಿನ ಪೆಂಕಾಕ್ ಸಿಲತ್ ರಾಷ್ಟ್ರೀಯ ಕ್ರೀಡಾಕೂಟ ಮುಕ್ತಾಯ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2025, 3:14 IST
Last Updated 30 ಸೆಪ್ಟೆಂಬರ್ 2025, 3:14 IST
ಕೊಪ್ಪಳದಲ್ಲಿ ಭಾನುವಾರ ಸಮಾರೋಪಗೊಂಡ ಕ್ರೀಡಾಕೂಟದಲ್ಲಿ ಅತಿಥಿಗಳು ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿದರು
ಕೊಪ್ಪಳದಲ್ಲಿ ಭಾನುವಾರ ಸಮಾರೋಪಗೊಂಡ ಕ್ರೀಡಾಕೂಟದಲ್ಲಿ ಅತಿಥಿಗಳು ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿದರು   

ಕೊಪ್ಪಳ: ‘ಜಿಲ್ಲೆಯಲ್ಲಿ ರಾಜ್ಯ ಸಂಸ್ಥೆಯನ್ನು ಹೊಂದಿರುವ ಪೆಂಕಾಕ್ ಸಿಲತ್ ಕ್ರೀಡೆಗೆ ಮುಖ್ಯಮಂತ್ರಿ ಅವರ ಹಂತದಲ್ಲಿ ಬಾಕಿ ಇರುವ ಮಾನ್ಯತೆಯನ್ನು ಕೊಡಿಸಲು ಕ್ರಮ ವಹಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಭರವಸೆ ನೀಡಿದರು.

ಸೆ. 26ರಿಂದ ಮೂರು ದಿನಗಳ ಕಾಲ ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 13ನೇ ರಾಷ್ಟ್ರೀಯ ಪೆಂಕಾಕ್ ಸಿಲತ್ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ ‘ಬರುವ ದಿನಗಳಲ್ಲಿ ಕ್ರೀಡೆಗೆ ಇನ್ನಷ್ಟು ಒತ್ತು ನೀಡಿ ಸಹಕಾರ ಕೊಡುತ್ತೇನೆ. ಕ್ರೀಡೆಯಿಂದ ಮನುಷ್ಯ ಹೆಚ್ಚು ಬೆಳಗುತ್ತಾನೆ’ ಎಂದರು.

ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಮಹಾಂತೇಶ ಪಾಟೀಲ್ ಮಾತನಾಡಿ ‘ದೇಶವೇ ಇಂದು ಕೊಪ್ಪಳದಲ್ಲಿ ನಿಂತ ಹಾಗೆ ಭಾಸವಾಗುತ್ತಿದೆ, ಇಷ್ಟು ಜನರನ್ನು ಕರೆಸಿ ಕ್ರೀಡಾಕೂಟ ನಡೆಸಿರುವದು ಸಾಮಾನ್ಯವಲ್ಲ, ಬಹುಭಾಷೆ ಹಾಗೂ ಬಹುಸಂಸ್ಕತಿ ಹೊಂದಿರುವ ದೇಶಕ್ಕೆ ಕೊಪ್ಪಳವನ್ನು ಪರಿಚಯಿಸಿದ್ದು ಶ್ಲಾಘನೀಯ’ ಎಂದರು. 

ADVERTISEMENT

ನಗರಸಭೆ ಅಧ್ಯಕ್ಷ ಅಮ್ಜದ್‌ ಪಟೇಲ್‌, ಜೆಡಿಎಸ್ ರಾಜ್ಯ ಕಾರ್ಯದರ್ಶಿ ವಿರೇಶ ಮಹಾಂತಯ್ಯನಮಠ, ಶಾಸಕ ಕೆ. ರಾಘವೇಂದ್ರ ಹಿಟ್ನಾಳ, ಪೆಂಕಾಕ್ ಸಿಲತ್ ರಾಜ್ಯ ಗೌರವ ಅಧ್ಯಕ್ಷ ಅಮರೇಗೌಡ ಬಯ್ಯಾಪೂರ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ರಡ್ಡಿ ಶ್ರೀನಿವಾಸ, ಸಾಯಿ ಸಂಸ್ಥೆಯ ಕುಸ್ತಿ ತರಬೇತುದಾರ ರಾಮ್ ಎಸ್. ಬುಡಕಿ, ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ರಾಜ್ಯ ಸಿಲತ್ ಸಂಸ್ಥೆ ಜಂಟಿ ಕಾರ್ಯದರ್ಶಿ ಮಂಜುನಾಥ ಜಿ. ಗೊಂಡಬಾಳ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.