ADVERTISEMENT

ಗ್ರಾಚ್ಯುಟಿ ಮೊತ್ತ ಪಾವತಿಸುವಂತೆ ಸರ್ಕಾರಕ್ಕೆ ನಿವೃತ್ತ ಅಂಗನವಾಡಿ ನೌಕರರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2025, 6:34 IST
Last Updated 5 ನವೆಂಬರ್ 2025, 6:34 IST
<div class="paragraphs"><p>ಕುಷ್ಟಗಿಯಲ್ಲಿ ಅಂಗನವಾಡಿಗಳ ನಿವೃತ್ತ ಕಾರ್ಯಕರ್ತೆಯರು ಸಿಡಿಪಿಒ ಯಲ್ಲಮ್ಮ ಹಂಡಿ ಅವರಿಗೆ ಮನವಿ ಸಲ್ಲಿಸಿದರು</p></div>

ಕುಷ್ಟಗಿಯಲ್ಲಿ ಅಂಗನವಾಡಿಗಳ ನಿವೃತ್ತ ಕಾರ್ಯಕರ್ತೆಯರು ಸಿಡಿಪಿಒ ಯಲ್ಲಮ್ಮ ಹಂಡಿ ಅವರಿಗೆ ಮನವಿ ಸಲ್ಲಿಸಿದರು

   

ಕುಷ್ಟಗಿ: ನಿವೃತ್ತಿಯಾಗಿರುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ತಮಗೆ ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಗ್ರಾಚ್ಯುಟಿ ಮೊತ್ತವನ್ನು ಪಾವತಿಸುವಂತೆ ಒತ್ತಾಯಿಸಿದ್ದಾರೆ.

ಈ ವಿಷಯ ಕುರಿತು ಮುಖ್ಯಮಂತ್ರಿಗೆ ಬರೆದ ಮನವಿಯನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಯಲ್ಲಮ್ಮ ಹಂಡಿ ಅವರಿಗೆ ಸಲ್ಲಿಸಿದರು.ಮಾತನಾಡಿದ ಪ್ರಮುಖರು, ‘2011-2023ರ ಅವಧಿಯಲ್ಲಿ ನಿವೃತ್ತಿಯಾಗಿರುವ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಗ್ರಾಚ್ಯುಟಿ ಪಾವತಿ ಕಾಯ್ದೆ 1972ರ ಅನ್ವಯ ಗ್ರಾಚ್ಯುಟಿ ಮೊತ್ತವನ್ನು ಪಾವತಿಸುವಂತೆ ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಹಾಗಾಗಿ ಅಂಗನವಾಡಿಯ ಎಲ್ಲ ನೌಕರರಿಗೂ ಈ ನಿಬಂಧನೆಗಳು ಅನ್ವಯಿಸುತ್ತವೆ. ನ್ಯಾಯಾಲಯದ ತೀರ್ಪನ್ನು ಒಪ್ಪಿ ಆದೇಶ ಜಾರಿ ಮಾಡುವಂತೆ ಒತ್ತಾಯಿಸಿ ಚಳವಳಿ ನಡೆಸಿದ ಪರಿಣಾಮ ರಾಜ್ಯ ಮಹಿಳಾ ಮತ್ತು ಮಕ್ಕಳ ಇಲಾಖೆ 2023ರ ಏಪ್ರಿಲ್‌ನಲ್ಲಿ ಗ್ರಾಚ್ಯುಟಿ ಪಾವತಿಸುವ ಕುರಿತು ಆದೇಶ ಹೊರಡಿಸಿತ್ತು. ನಂತರ ₹183 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಸಭೆಯ ನಿರ್ಣಯಗಳನ್ನು ಹಣಕಾಸು ಇಲಾಖೆಗೆ ಸಲ್ಲಿಸಲಾಗಿತ್ತು. ಆದರೆ ಈ ವಿಷಯದಲ್ಲಿ ಹಣಕಾಸು ಇಲಾಖೆ ಅನುದಾನ ಬಿಡುಗಡೆ ಮಾಡದೆ ನೌಕರರನ್ನು ಸತಾಯಿಸುತ್ತಾ ಬಂದಿದೆ ಎಂದು ದೂರಿದರು. ವಿಳಂಬ ಮಾಡದೆ ಗ್ರಾಚ್ಯುಟಿ ಪಾವತಿಗೆ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ADVERTISEMENT

ಕಲಾವತಿ ಮೆಣೆದಾಳ, ಶಿವಲಿಂಗಮ್ಮ ಹಿರೇಮಠ, ಪಕ್ಕಮ್ಮ, ಕಸ್ತೂರಿ, ಜಯಶ್ರೀ, ಶಕುಂತಲಾ, ನಿಂಗಮ್ಮ, ರುಕ್ಮಿಣಿ, ಮಹಾದೇವಮ್ಮ ಪುರದ  ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.