
ಕನಕಗಿರಿ: ಇಲ್ಲಿನ ಶಾಮೀದಸಾಬ ಗುರಿಕಾರ ಅವರ ಮನೆಯಲ್ಲಿ ಶಬರಿಮಲೆಸ್ವಾಮಿ ಅಯ್ಯಪ್ಪನ ಪೂಜಾ ಕಾರ್ಯಕ್ರಮ ಶನಿವಾರ ನಡೆಯಿತು.
ಕಟ್ಟಿಗೆಯಿಂದ ತಯಾರಿಸಿದ 18 ಮೆಟ್ಟಿಲನ್ನು ಹೂವುಗಳಿಂದ ಅಲಂಕರಿಸಲಾಗಿತ್ತು, ಶಾಮೀದಸಾಬ ಕುಟುಂಬದವರು ಕರ್ಪೂರ ಹಚ್ಚಿ ಭಕ್ತಿ ಮರೆದು ಪಟ್ಟಣದ ಸೌಹಾರ್ದತೆಯನ್ನು ಮತ್ತಷ್ಟು ಹೆಚ್ಚಿಸಿದರು.
ಅಯ್ಯಪ್ಪ, ಗಣೇಶ, ಸುಬ್ರಹ್ಮಣ್ಯ ದೇವರುಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಲಾಯಿತು.
ಅಯ್ಯಪ್ಪನ ಹೆಸರಿನಲ್ಲಿರುವ ಭಕ್ತಿ ಹಾಗೂ ಭಜನೆ ಗೀತೆಗಳ ಹಾಡಿಗೆ ಗುರಿಕಾರ ಅವರು ಧ್ವನಿಗೂಡಿಸಿದರು. ಶಬರಿಮಲೆ ಸಮವಸ್ತ್ರ ಧರಿಸಿದ ಮಾಲಾಧಾರಿಗಳು ಹಾಗೂ ಇತರರಿಗೆ ಅನ್ನ ಪ್ರಸಾದ ಆಯೋಜಿಸಲಾಗಿತ್ತು.
ಹಿರಿಯ ಮಾಲಾಧಾರಿಗಳಾದ ರಮೇಶ ದಾಸರ, ಹನುಮಂತಪ್ಪ ಮರಾಠಿ, ಮಲ್ಲಿಕಾರ್ಜುನರೆಡ್ಡಿ ಮಾದಿನಾಳ,
ಆನಂದ ಭತ್ತದ, ನಿಂಗಪ್ಪ ಪೂಜಾರ, ಅಮರೇಶ ಪಟ್ಟಣಶೆಟ್ರ, ಅಂಬಾಜಿರಾವ್ ಆರೇರ್ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.