ಕುಷ್ಟಗಿ: ಪಟ್ಟಣದಲ್ಲಿ ಗುರುವಾರ ಅಯ್ಯಪ್ಪ ಸ್ವಾಮಿ ಮೂರ್ತಿಯ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.
ವಿವಿಧ ಪುಷ್ಪಮಾಲೆಗಳಿಂದ ಅಲಂಕೃತಗೊಂಡಿದ್ದ ವಾಹನದಲ್ಲಿ ಪ್ರಮುಖ ಬೀದಿಗಳಲ್ಲಿ ನಡೆದ ಮೆರವಣಗೆಯಲ್ಲಿ ಬಹಳಷ್ಟು ಸಂಖ್ಯೆ ಅಯ್ಯಪ್ಪ ಭಕ್ತರು ಪಾಲ್ಗೊಂಡಿದ್ದರು. ಪಟ್ಟಣದ ರಸ್ತೆಗಳನ್ನು ತಳಿರುತೋರಣಗಳಿಂದ ಅಲಂಕರಿಸಲಾಗಿತ್ತು.
ಅದಕ್ಕೂ ಪೂರ್ವದಲ್ಲಿ ಮಲ್ಲಯ್ಯ ಗುರುಸ್ವಾಮಿ ನೇತೃತ್ವದಲ್ಲಿ ಮಂಡಲ ಪೂಜೆ, ಗಣಪತಿ ಹೋಮ ಇತರೆ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ದುರ್ಗಾಪರಮೇಶ್ವರಿ ಆಶ್ರಮದ ಸದಾನಂದ ಮಹಾರಾಜರು ಮೆರವಣಿಗೆ ವೇಳೆ ಉಪಸ್ಥಿತರಿದ್ದರು.
ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಟ್ರಸ್ಟ್‌ನ ಅಧ್ಯಕ್ಷರು, ಇತರೆ ಪ್ರತಿನಿಧಿಗಳು, ಸದಸ್ಯರು ಹಾಗೂ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಹಾಗೂ ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಅಯ್ಯಪ್ಪ ನಾಮಸ್ಮರಣೆ ನಡೆಸಲಾಯಿತು. 27ರಂದು ಸಂಜೆ 7 ಗಂಟೆಗೆ ಅಯ್ಯಪ್ಪ ಸ್ವಾಮಿಗೆ ಪೂಜೆ, ಮಹಾಮಂಗಳಾರತಿ, ರಾತ್ರಿ 9 ಗಂಟೆಗೆ ಅನ್ನ ದಾಸೋಹ ನಡೆಯಲಿದೆ ಎಂದು ಸಮಿತಿ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.