ADVERTISEMENT

ಕಚೇರಿಯಲ್ಲಿ ಜನ್ಮ ದಿನಾಚರಣೆ, ತಹಶೀಲ್ದಾರ್‌ಗೆ ನೋಟಿಸ್

​ಪ್ರಜಾವಾಣಿ ವಾರ್ತೆ
Published 18 ಜೂನ್ 2021, 5:21 IST
Last Updated 18 ಜೂನ್ 2021, 5:21 IST
ಕನಕಗಿರಿ ತಹಶೀಲ್ದಾರ್ ಕಚೇರಿಯಲ್ಲಿ ತಹಶೀಲ್ದಾರ್ ರವಿ ಅಂಗಡಿ ಅವರ ಜನ್ಮದಿನ ಆಚರಣೆ ಮಾಡಿರುವುದು
ಕನಕಗಿರಿ ತಹಶೀಲ್ದಾರ್ ಕಚೇರಿಯಲ್ಲಿ ತಹಶೀಲ್ದಾರ್ ರವಿ ಅಂಗಡಿ ಅವರ ಜನ್ಮದಿನ ಆಚರಣೆ ಮಾಡಿರುವುದು   

ಕನಕಗಿರಿ: ಕೋವಿಡ್‌ ಸಂಕಷ್ಟದ ಮಧ್ಯೆ ನಿಯಮಾವಳಿ ಪಾಲನೆ ಮಾಡದೆ ಸರ್ಕಾರಿ ರಜೆ ದಿನದಲ್ಲಿ ತಮ್ಮ ಕಚೇರಿಯಲ್ಲಿಯೇ ಜನ್ಮದಿನ ಆಚರಿಸಿಕೊಂಡ ಘಟನೆಗೆ ಇಲ್ಲಿನತಹಶೀಲ್ದಾರ್‌ ರವಿ ಅಂಗಡಿ ಅವರಿಗೆ ನೋಟಿಸ್‌ ಜಾರಿ ಮಾಡಲಾಗಿದೆ.

ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಸರ್ಕಾರ ಲಾಕ್‌ಡೌನ್ ಘೋಷಣೆ ಮಾಡಿದ್ದು, ಮಾರ್ಗಸೂಚಿ ಅನ್ವಯ ಸರ್ಕಾರಿ ಕಚೇರಿಗಳಲ್ಲಿ ಯಾವುದೇ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಬಂಧವಿದೆ. ಆದರೆ ತಹಶೀಲ್ದಾರ್ ಅಂಗಡಿ ಸೇರಿದಂತೆ ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಮಾಸ್ಕ್ ಧರಿಸದೆ ಹಾಗೂ ವ್ಯಕ್ತಿಗತ ಅಂತರ ಕಾಪಾಡಿಕೊಳ್ಳದೆ ಕೋವಿಡ್ ನಿಯಮ ಉಲ್ಲಂಘಿಸಿ ಜನ್ಮ ದಿನಾಚರಣೆಯಲ್ಲಿ ಭಾಗವಹಿಸಿದ್ದಾರೆ ಎನ್ನಲಾದ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ಹರದಾಡಿದೆ.

ಕೋವಿಡ್ ತಿಳಿವಳಿಕೆ ಮೂಡಿಸಬೇಕಿದ್ದ ಅಧಿಕಾರಿಗಳೇ ನಿಯಮ ಉಲ್ಲಂಘಿಸಿ ಮೇಲಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ADVERTISEMENT

ಈ ಕುರಿತುಉಪವಿಭಾಗಾಧಿಕಾರಿ ನಾರಾಯಣರೆಡ್ಡಿ ಕನಕರೆಡ್ಡಿ ಅವರು ಸ್ಪಷ್ಟನೆಕೇಳಿ ತಹಶೀಲ್ದಾರ್‌ಗೆ ನೋಟಿಸ್ ಜಾರಿ ಮಾಡಿದ್ದಾರೆ.

‘ಕೋವಿಡ್ ಲಸಿಕಾ ಕೇಂದ್ರದ ಪರಿಶೀಲನೆ ನಡೆಸಿ ಕಚೇರಿಗೆ ಭೇಟಿ ನೀಡಿದಾಗ ಸಿಬ್ಬಂದಿ ಆಕಸ್ಮಿಕವಾಗಿ ನನಗೆ ತಿಳಿಯದಂತೆ ಕೇಕ್ ತಂದು ಒತ್ತಾಯ ಪೂರ್ವಕವಾಗಿ ಜನ್ಮದಿ ನಾಚರಣೆ ಮಾಡಿದ್ದಾರೆ. ಇದು ಪೂರ್ವ ನಿಯೋಚಿತವಾದದ್ದಲ್ಲ. ಸಿಬ್ಬಂದಿ ಅಭಿಮಾನದಿಂದ ಬೆರಳಣಿಕೆ ಸಂಖ್ಯೆಯಲ್ಲಿ ಇದ್ದರು. ಯಾರೋ ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಗೊಂದಲ ಮೂಡಿಸಿದ್ದಾರೆ’ ಎಂದು ತಹಶೀಲ್ದಾರ್ ರವಿ ಅಂಗಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.