ADVERTISEMENT

ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ ಕಾಂಗ್ರೆಸ್ ನಮಗೆ ಪಾಠ ಮಾಡುತ್ತಿದೆ: ಕಟೀಲ್ ಟೀಕೆ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2021, 9:59 IST
Last Updated 18 ನವೆಂಬರ್ 2021, 9:59 IST
ನಳೀನ್ ಕುಮಾರ್ ಕಟೀಲ್
ನಳೀನ್ ಕುಮಾರ್ ಕಟೀಲ್   

ಕೊಪ್ಪಳ: ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ತುರ್ತು ಪರಿಸ್ಥಿತಿ ತರುವ ಮೂಲಕ ನೂರಕ್ಕೂ ಹೆಚ್ಚು ಚುನಾಯಿತ ಸರ್ಕಾರಗಳನ್ನು ಉರುಳಿಸಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿ ನಮಗೆ ಪಾಠ ಮಾಡಲು ಯಾವ ನೈತಿಕತೆ ಇದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಪ್ರಶ್ನಿಸಿದರು.

ಅವರು ಗುರುವಾರ ನಗರದಲ್ಲಿ ನಡೆದ ಜನಸ್ವರಾಜ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದು ಸುದ್ದಿಗಾರರೊಂದಿಗೆ ಮಾತನಾಡಿದರು.

ತನ್ನ 70 ವರ್ಷದ ಆಡಳಿತದಲ್ಲಿ ಸುಳ್ಳು, ವಂಚನೆ ಮತ್ತು ಮೋಸ ಮಾಡಿದೆ. ಅದು ಅವರ ರಕ್ತದಲ್ಲೇ ಇದೆ. ಬಡವರು ಬಡವರಾಗಿ ಉಳಿದರು. ಮುಸ್ಲಿಮರು ಅನಕ್ಷರಸ್ಥರಾಗಿಯೇ ಉಳಿದರು ಎಂದು ಜರಿದರು.

ADVERTISEMENT

ಬಿಟ್ ಕಾಯಿನ್ ಮಹಮ್ಮದ್ ನಲಪಾಡ್ ವಿದ್ವತ್ ಎಂಬುವನ ಮೇಲೆ ಹಲ್ಲೆ ಮಾಡಿದಾಗ ಘಟನೆ ಹೊರ ಬಂದಿದೆ. ಆಗ ತನಿಖೆ ಮಾಡದ ಇವರು ನಮ್ಮ ಮೇಲೆ ಗೂಬೆ ಕೂರಿಸಲು ಬರುತ್ತಿದ್ದಾರೆ. ಈ ಕುರಿತು ಅಧಿವೇಶನದಲ್ಲಿ ಚರ್ಚೆ ನಡೆದಿದೆ. ಆಗ ಸಿಎಂ ಆಗಿದ್ದ ಸಿದ್ದರಾಮಯ್ಯ ಪತ್ರಿಕ್ರಿಯೆ ನೀಡುದ್ದಾರೆ. ಈಗ ನೋಡಿದರೆ ನನಗೆ ಏನೂ ಗೊತ್ತಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದರು.

ಏನೇ ಆಗಲಿ. ಈಗಾಗಲೇ ಬಿಟ್ ಕಾಯಿನ್ ಬಗ್ಗೆ ಇಡಿ ಮತ್ತು ಸಿಬಿಐ ಇಂಟರ್ ಪೋಲ್ ಮೂಲಕ ತನಿಖೆ ನಡೆಯುತ್ತಿದ್ದು, ತನಿಖೆ ಬಳಿಕ ಸತ್ಯ ಗೊತ್ತಾಗುತ್ತದೆ. ತನಿಖೆ ನಡೆಯುವ ವೇಳೆ ಈಗಲೇ ಎಲ್ಲವನ್ನೂ ಹೇಳಲುಬಾರದು ಎಂದರು.

ಕಾಂಗ್ರೆಸ್ ಮುಸ್ಲಿಂರನ್ನು ಓಲೈಕೆ ಮಾಡಿ ಕೇವಲ ಮತ ಬ್ಯಾಂಕ್ ಆಗಿ ಬಳಕೆ ಮಾಡಿಕೊಂಡಿದೆ. ಅವರ ಬಗ್ಗೆ ಯಾವುದೇ ಅಭಿವೃದ್ಧಿ ಮಾಡಿಲ್ಲ. ಚುನಾವಣೆ ಬಂದಾಗ ಮಾತ್ರ ತಮ್ಮ ರಾಜಕೀಯ ಸ್ವಾರ್ಥಕ್ಕೆ ಮಾತ್ರ ಅವರನ್ನ ಮೇಲೆತ್ತುವ ಕೆಲಸ ಮಾಡುತ್ತಿದೆ ಎಂದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ದೊಡ್ಡನಗೌಡ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.