ADVERTISEMENT

ಚಳಗೇರಾ ಗ್ರಾ.ಪಂ ; ಅಧ್ಯಕ್ಷರಾಗಿ ಮಹಾಂತೇಶ ಹಡಪದ ಆಯ್ಕೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2022, 8:40 IST
Last Updated 2 ಜೂನ್ 2022, 8:40 IST
ಕುಷ್ಟಗಿ ತಾಲ್ಲೂಕಿನ ಚಳಗೇರಾ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಫಲಿತಾಂಶದ ಬಳಿಕ ವಿಜಯೋತ್ಸವ ಆಚರಿಸಿದ ಬಿಜೆಪಿ ಕಾರ್ಯಕರ್ತರು
ಕುಷ್ಟಗಿ ತಾಲ್ಲೂಕಿನ ಚಳಗೇರಾ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಫಲಿತಾಂಶದ ಬಳಿಕ ವಿಜಯೋತ್ಸವ ಆಚರಿಸಿದ ಬಿಜೆಪಿ ಕಾರ್ಯಕರ್ತರು   

ಕುಷ್ಟಗಿ: ತಾಲ್ಲೂಕಿನ ಚಳಗೇರಾ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಮಹಾಂತೇಶ ಹಡಪದ ಮತ್ತು ಉಪಾಧ್ಯಕ್ಷೆಯಾಗಿ ಶಾಂತವ್ವ ಜಾಲಿ ಆಯ್ಕೆಯಾದರು.

ತಲಾ 13 ಮತಗಳನ್ನು ಪಡೆದು ಚುನಾಯಿತರಾಗಿದ್ದಾರೆ.

ಬುಧವಾರ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಆಯ್ಕೆ ಚುನಾವಣೆ ಪ್ರಕ್ರಿಯೆ ನಡೆಯಿತು. ಕಾಂಗ್ರೆಸ್‌ ಬೆಂಬಲಿತ ಮಾರುತಿ ಗಡಾದ ಹಾಗೂ ನಿಂಬವ್ವ ಕತ್ತಿ ತಲಾ 10 ಮತ ಪಡೆದು ತಲಾ 3 ಮತಗಳ ಅಂತರದಿಂದ ಪರಾಭವಗೊಂಡರು. ಒಟ್ಟು 24 ಸದಸ್ಯರ ಪೈಕಿ ಸದಸ್ಯ ಶರಣಬಸವ ಗಾಡಗೋಳ ಗೈರಾಗಿದ್ದರು.

ADVERTISEMENT

ತಹಶೀಲ್ದಾರ್ ಎಂ.ಸಿದ್ದೇಶ್ ಅವರು ಚುನಾವಣೆ ಪ್ರಕ್ರಿಯೆ ನಡೆಸಿದರು. ಮುಂಜಾಗ್ರತೆಗಾಗಿ ಸರ್ಕಲ್‌ ಇನ್‌ಸ್ಪೆಕ್ಟರ್ ಎನ್‌.ಆರ್‌.ನಿಂಗಪ್ಪ, ಸಬ್‌ಇನ್‌ಸ್ಪೆಕ್ಟರ್ ತಿಮ್ಮಣ್ಣ ನಾಯಕ ಅವರು ಬಂದೋಬಸ್ತ್‌ ವ್ಯವಸ್ಥೆ ಮಾಡಿದ್ದರು. ಪಿಡಿಒ ಬಸವರಾಜ ಸಂಕನಾಳ, ಚುನಾವಣಾ ವಿಭಾಗದ ಚೇತನ್, ಸಿಬ್ಬಂದಿ ಇದ್ದರು.

ಫಲಿತಾಂಶದ ಬಳಿಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಶರಣು ತಳ್ಳಿಕೇರಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಗ್ರಾ.ಪಂ ಮಾಜಿ ಅಧ್ಯಕ್ಷ ವೀರನಗೌಡ ಪಾಟೀಲ, ತಾಲ್ಲೂಕು ಭೂ ನ್ಯಾಯ ಮಂಡಳಿ ಸದಸ್ಯ ಸತೀಶ ಕುಲಕರ್ಣಿ, ಶಶಿಧರ ಕವಲಿ, ಮಹಾಲಿಂಗಪ್ಪ ದೋಟಿಹಾಳ, ತಾ.ಪಂ ಮಾಜಿ ಸದಸ್ಯ ಶರಣಪ್ಪ ಮಲಕಾಪುರ, ಪ್ರಭುಶಂಕರಗೌಡ, ವಿಜಯ ಹಿರೇಮಠ, ಕಂದಕೂರಪ್ಪ ವಾಲ್ಮೀಕಿ, ಮುತ್ತು ರಾಠೋಡ, ದೊಡ್ಡಬಸುವ ಸುಂಕದ, ಲಕ್ಷ್ಮಣ ಕಟ್ಟಿಹೊಲ, ಬಸವರಾಜ ಬಾಗ್ಯದ ಇದ್ದರು.

ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷರ ಕಾರನ್ನು ಚುನಾವಣೆ ಮತ್ತು ಪಕ್ಷದ ಕೆಲಸಗಳಿಗೆ ಬಳಸಿಕೊಂಡರು ಎಂಬ ಆರೋಪ ಕೇಳಿಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.