ಅಳವಂಡಿ: ಸಮೀಪದ ಬೆಟಗೇರಿ ಗ್ರಾಮದ ಎಸ್‌ಸಿ ಕಾಲೊನಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪಕ್ಕದಲ್ಲಿ ಚರಂಡಿಗಳಿಂದ ದುರ್ನಾತ ಬೀರುತ್ತಿದೆ. ಹಾಗಾಗಿ ಸ್ವಚ್ಛತೆ ಕಾಪಾಡುವಂತೆ ಅಲ್ಲಿನ ಶಾಲಾ ವಿದ್ಯಾರ್ಥಿಗಳು ಹಾಗೂ ಪಾಲಕರು ಗ್ರಾಮ ಪಂಚಾಯಿತಿ ಎದುರು ಕೆಲ ಕಾಲ ಪ್ರತಿಭಟನೆ ನಡೆಸಿದರು.
‘ಶಾಲೆಯ ಕಾಂಪೌಂಡ್ ಪಕ್ಕದಲ್ಲಿ ಚರಂಡಿ ಇರುವುದರಿಂದ ಚರಂಡಿ ಸಂಪೂರ್ಣ ಹೂಳು ತುಂಬಿಕೊಂಡು ನೀರು ಸರಾಗವಾಗಿ ಹರಿಯಲು ಸಾಧ್ಯವಾಗುತ್ತಿಲ್ಲ. ಇದರಿಂದ ಚರಂಡಿಯ ದುರ್ನಾತಕ್ಕೆ ಅನೇಕ ರೋಗಗಳಿಗೆ ತುತ್ತಾಗುವ ಪರಿಸ್ಥಿತಿ ಎದುರಾಗಿದೆ’ ಎಂದು ವಿದ್ಯಾರ್ಥಿಗಳು ಹಾಗೂ ಪಾಲಕರು ಆರೋಪಿಸಿದರು.
‘ಶಾಲಾ ಮೈದಾನವು ಚರಂಡಿಗಿಂತ ಕೆಳಮಟ್ಟದಲ್ಲಿ ಇರುವುದರಿಂದ ಮಳೆ ಬಂದರೆ ಮಳೆ ನೀರು ಸಂಪೂರ್ಣವಾಗಿ ಮೈದಾನ ಸೇರುತ್ತದೆ. ಇದರಿಂದ ಪರದಾಡುವುದು ಸಾಮಾನ್ಯವಾಗಿದೆ. ಹಲವಾರು ಬಾರಿ ಶಾಲಾ ಮೈದಾನ ಅಭಿವೃದ್ಧಿ ಪಡಿಸಿ ಎಂದು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ’ ಎಂದರು.
ಇತ್ತೀಚೆಗೆ ಡೆಂಗಿ ವ್ಯಾಪಕವಾಗಿ ಆವರಿಸಿದೆ. ಈ ಶಾಲೆಯ ಪಕ್ಕದಲ್ಲಿ ಸ್ವಚ್ಛತೆ ಇಲ್ಲದಿರುವುದರಿಂದ ರೋಗದ ಭೀತಿ ಹರಡಿದೆ’ ಎಂದುನಿವಾಸಿಗಳು ದೂರಿದರು.
ಪ್ರಮುಖರಾದ ಭರಮಪ್ಪ ಕಂಬಳಿ, ಶರಣಪ್ಪ, ದುರಗೇಶ, ನಾರಾಯಣಪ್ಪ, ಮಹೇಶ, ಕೋಟೇಶ, ಸಿದ್ದಣ್ಣ, ಸಿದ್ದು ಗುಡಿಮುಂದಿನ, ಸಿದ್ದಪ್ಪ, ಸಂಕಪ್ಪ, ಮಾರುತಿ, ಮೈಲ್ಲಪ್ಪ, ಗುಂಡಪ್ಪ, ಮರಿಯಪ್ಪ, ವಿದ್ಯಾರ್ಥಿಗಳು ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.