ADVERTISEMENT

ಕೇಂದ್ರ ಸೂಚಿಸಿದಾಗ ಸಂಪುಟ ವಿಸ್ತರಣೆ: ಬಿಎಸ್‌ವೈ

​ಪ್ರಜಾವಾಣಿ ವಾರ್ತೆ
Published 9 ಜನವರಿ 2021, 7:22 IST
Last Updated 9 ಜನವರಿ 2021, 7:22 IST
   

ಕೊಪ್ಪಳ: ಹಲವು ದಿನಗಳಿಂದ ಸಂಪುಟ ವಿಸ್ತರಣೆ ಅಥವಾ ಪುನರ್ರಚನೆ ನನೆಗುದಿ ಕುರಿತು ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೇಂದ್ರ ತಿಳಿಸಿದಾಗ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದರು.

ಕೊಪ್ಪಳದ ಬಸಾಪುರ ಏರ್‌ಸ್ಟ್ರಿಪ್‌ನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರೋಕ್ಷವಾಗಿ ಸಂಪುಟ ಪುನರ್ರಚನೆ ಇಲ್ಲ, ಸಂಕ್ರಾಂತಿ ನಂತರ ಸಂಪುಟ ವಿಸ್ತರಣೆ ಆಗಲಿದೆ ಎಂದು ತಿಳಿಸಿದರು.

‘ಫೋಟೋ ತೆಗೆಸಿಕೊಂಡದ್ದು ಅಪರಾಧ ಏನಲ್ಲ’
ರಾಜ್ಯದ ಬಿಜೆಪಿ ಸಚಿವರು, ಶಾಸಕರ ಜೊತೆ ಯುವರಾಜ್ ಫೋಟೋ ತೆಗೆಸಿಕೊಂಡದ್ದು ಅಪರಾಧ ಏನಲ್ಲ. ಆದರೆ ಯುವರಾಜ ಪ್ರಕರಣ ತನಿಖೆ ಹಂತದಲ್ಲಿದೆ. ತನಿಖೆ ಮುಗಿದ ನಂತರ ಸತ್ಯಾಸತ್ಯತೆ ಹೊರಬೀಳಲಿದೆ ಎಂದು ಹೇಳಿದರು.

ADVERTISEMENT

ಕೋವಿಡ್ ಕಾರಣ, ಅತಿವೃಷ್ಟಿ, ಬರಗಾಲದ ಆಪತ್ತುಗಳಿಂದಾಗಿ ನಿರೀಕ್ಷಿಸಿದಷ್ಟು ಸರಕಾರದಿಂದ ಕೆಲಸ ಮಾಡಲಾಗಿಲ್ಲ. ರಾಜ್ಯದ ಆರ್ಥಿಕ ಸ್ಥಿತಿ ಸರಿ ಇಲ್ಲ. 40-50 ಸಾವಿರ ಬಜೆಟ್ ಖೋತಾ ಆಗಿದೆ. ಇವೆಲ್ಲವೂ ರಾಜ್ಯದ ಜನತೆಗೆ ಗೊತ್ತಿದೆ. ಜನರು ಸರಕಾರಕ್ಕೆ ಸಹಕಾರ ನೀಡಬೇಕು ಎಂದು ವಿವರಿಸಿದರು.

ದೇಶದಲ್ಲಿ ಮೊದಲ ಟಾಯ್ಸ್ ಕ್ಲಸ್ಟರ್ ಕಾರ್ಯಕ್ರಮಕ್ಕೆ ಭೂಮಿ ಪೂಜೆ ಮಾಡ್ತಿದಿವಿ. ಕೆಲಸ ಆರಂಭವಾದ ಬಳಿಕ ಪ್ರಧಾನಿ ಮೋದಿಯವರಿಂದ ಉದ್ಘಾಟನೆ ಮಾಡಿಸುವ ಅಪೇಕ್ಷೆ ಇದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಸಚಿವರಾದ ಬಿ.ಸಿ.ಪಾಟೀಲ, ಆನಂದ್ ಸಿಂಗ್, ಸಂಸದ ಕರಡಿ ಸಂಗಣ್ಣ, ಶಾಸಕ ಹಾಲಪ್ಪ ಆಚಾರ್, ಪರಣ್ಣ ಮುನವಳ್ಳಿ, ಬಸವರಾಜ‌ ದಡೆಸೂಗುರು ಮತ್ತಿತರರು ಇದ್ದರು.

ಆಟಿಕೆ ಕ್ಲಸ್ಟರ್ ನಿರ್ಮಾಣಕ್ಕೆ ಭೂಮಿ ಪೂಜೆ
ಜಿಲ್ಲೆಯ ಕುಕನೂರ ತಾಲ್ಲೂಕಿನ ಭಾನಾಪುರ ತಳಬಾಳ ಗ್ರಾಮದಲ್ಲಿ ಶನಿವಾರ ಸಿ.ಎಂ.ಯಡಿಯೂರಪ್ಪ ಆಟಿಕೆ ಕ್ಲಸ್ಟರ್ ನಿರ್ಮಾಣಕ್ಕೆ ಭೂಮಿ ಪೂಜೆ ನೆರೆವೇರಿಸಿದರು.ಎಕಸ್ ಕಂಪೆನಿ ಎಂ.ಡಿ.ಅರವಿಂದ ಮೆಳ್ಳಿಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಜಿ ಕೈಗಾರಿಕೆ ಸಚಿವ ಆರ್.ವಿ.ದೇಶಪಾಂಡೆ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.