ADVERTISEMENT

ಲೋಕಾಯುಕ್ತ ಬಲೆಗೆ ಕಮಾಡೆಂಟ್

​ಪ್ರಜಾವಾಣಿ ವಾರ್ತೆ
Published 18 ಜನವರಿ 2023, 6:53 IST
Last Updated 18 ಜನವರಿ 2023, 6:53 IST
   

ಕೊಪ್ಪಳ: ಹೋಮ್‌ಗಾರ್ಡ್ ವರ್ಗಾವಣೆಗೆ ಲಂಚ ಪಡೆಯುವ ವೇಳೆ ಜಿಲ್ಲಾ ಕಮಾಂಡೆಂಟ್ ಗವಿಸಿದ್ದಪ್ಪ ಪೂಜಾರ ಹಾಗೂ ಕೊಪ್ಪಳ ತಾಲ್ಲೂಕು ಕಮಾಂಡೆಂಟ್ ರುದ್ರಪ್ಪ ಪತ್ತಾರ ಮಂಗಳವಾರ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ಭ್ರಷ್ಟಾಚಾರ ನಿಗ್ರಹ ದಳವನ್ನು ರದ್ದು ಮಾಡಿ ಲೋಕಾಯುಕ್ತಕ್ಕೆ ಮರಳಿ ಅಧಿಕಾರದ ಬಳಿಕ ಜಿಲ್ಲೆಯಲ್ಲಿ ದಾಖಲಾದ ಬಲೆಗೆ ಬಿದ್ದ ಮೊದಲ ಪ್ರಕರಣ ಇದಾಗಿದೆ.

ಜಿಲ್ಲಾ ಮಾನಸಿಕ ವಿಭಾಗದ ಕಚೇರಿಯಲ್ಲಿ ಮುನಿರಾಬಾದ್‌ನ ಮೆಹಬೂಬ್ ಎಂಬುವವರು ಹೋಮ್‌ಗಾರ್ಡ್‌ ಆಗಿ ಕೆಲಸ ಮಾಡುತ್ತಿದ್ದರು. ಗಂಗಾವತಿಗೆ ವರ್ಗಾವಣೆ ಕೇಳಿದ್ದಕ್ಕೆ ₹10 ಸಾವಿರ ನೀಡುವಂತೆ ಅಧಿಕಾರಿಗಳು ಬೇಡಿಕೆ ಇಟ್ಟಿದ್ದರು. ರುದ್ರಪ್ಪ ಮಧ್ಯವರ್ತಿಯಾಗಿ ವ್ಯವಹಾರ ಬಗೆಹರಿಸಿದ್ದ.

ADVERTISEMENT

ಮೆಹಬೂಬ್‌ ಹಣ ಕೊಡುವ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.