ADVERTISEMENT

ಹುತಾತ್ಮರ ಸ್ಮರಣೆ ಶ್ಲಾಘನೀಯ: ಮಾಲಗಿತ್ತಿ

ಘರ್ ಘರ್ ಶೌರ್ಯ ಸನ್ಮಾನ, ಸೈನಿಕರ ಕುಟುಂಬದವರಿಗೆ ಗೌರವ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2025, 7:03 IST
Last Updated 11 ಜುಲೈ 2025, 7:03 IST
ಕೊಪ್ಪಳದಲ್ಲಿ ಘರ್ ಘರ್ ಶೌರ್ಯ ಸನ್ಮಾನ ಕಾರ್ಯಕ್ರಮದ ಅಡಿಯಲ್ಲಿ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಕುಟುಂಬದವರನ್ನು  ಸೇನೆಯ ವತಿಯಿಂದ ಸನ್ಮಾನಿಸಲಾಯಿತು
ಕೊಪ್ಪಳದಲ್ಲಿ ಘರ್ ಘರ್ ಶೌರ್ಯ ಸನ್ಮಾನ ಕಾರ್ಯಕ್ರಮದ ಅಡಿಯಲ್ಲಿ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಕುಟುಂಬದವರನ್ನು  ಸೇನೆಯ ವತಿಯಿಂದ ಸನ್ಮಾನಿಸಲಾಯಿತು   

ಕೊಪ್ಪಳ: ‘ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರನ್ನು ಸ್ಮರಿಸುವುದು ಮತ್ತು ಅವರ ಕುಟುಂಬದವರನ್ನು ಗೌರವಿಸುವ ಕಾರ್ಯ ಶ್ಲಾಘನೀಯ’ ಎಂದು ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಹೇಳಿದರು.

ನಗರದ ನಿವೃತ್ತ ಸೈನಿಕರ ಸಂಘದ ಕಚೇರಿಯಲ್ಲಿ ಬುಧವಾರ ಕೇಂದ್ರ ಸರ್ಕಾರದ ಸೇನೆಯ ವತಿಯಿಂದ ಘರ್ ಘರ್ ಶೌರ್ಯ ಸನ್ಮಾನ ಕಾರ್ಯಕ್ರಮದಡಿಯಲ್ಲಿ ಕಾರ್ಗಿಲ್ ಹುತಾತ್ಮ ಯೋಧರ ಪತ್ನಿಯರಿಗೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ,‘ನಿವೃತ್ತ ಸೈನಿಕರ ಸಾಕಷ್ಟು ಬೇಡಿಕೆಗಳಿವೆ. ಅವುಗಳನ್ನು ಈಡೇರಿಸುವ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಆದರೂ ಕಾನೂನು ಸಮಸ್ಯೆಯಿಂದ ತೊಡಕಾಗಿದ್ದರಿಂದ ಆಗಿಲ್ಲ’ ಎಂದರು.

ಸೇನೆಯ ಪರವಾಗಿ ಆಗಮಿಸಿದ್ದ ನಾಯಕ ಸುಬೇದಾರ್‌ ತಿಲಕ್ ಮಾತನಾಡಿ,‘ಕಾರ್ಗಿಲ್ ಯುದ್ಧದಲ್ಲಿ ಹೋರಾಟ ಮಾಡಿ, ಹುತಾತ್ಮರಾದವರ ಕುಟಂಬದವರನ್ನು ಗೌರವಿಸುವುದಕ್ಕಾಗಿ ಘರ್ ಘರ್ ಶೌರ್ಯ ಸನ್ಮಾನ ಹಮ್ಮಿಕೊಳ್ಳಲಾಗಿದೆ. ಅದರಂತೆ ದೇಶದಾದ್ಯಂತ 521 ಕುಟುಂಬದವರ ಬಳಿಗೆ ಸೇನೆ ತೆರಳಿ ಗೌರವಿಸುತ್ತಿದೆ’ ಎಂದು ಹೇಳಿದರು.

ADVERTISEMENT

ಕೊಪ್ಪಳದಲ್ಲಿ ಮಲ್ಲಯ್ಯ ಮೇಗಳಮಠ ಅವರ ಪತ್ನಿ ಸರೋಜಾ ಹಾಗೂ ಶಿವಬಸಯ್ಯ ಕುಲಕರ್ಣಿ ಅವರ ಪತ್ನಿ ನಿರ್ಮಲಾ ಅವರನ್ನು ಘರ್ ಘರ್ ಶೌರ್ಯ ಸನ್ಮಾನ ಕಾರ್ಯಕ್ರಮದಡಿ ಸ್ಥಳೀಯ ನಿವೃತ್ತ ಸೈನಿಕರ ಸಂಘದ ಸಹಯೋಗದಲ್ಲಿ ಸನ್ಮಾನಿಸಲಾಯಿತು.

ಕೊಪ್ಪಳ ತಹಶೀಲ್ದಾರ್‌ ವಿಠ್ಠಲ್ ಚೌಗುಲಾ, ಸಂತರಾಮ ಭಟ್, ದ್ರಾಕ್ಷಾಯಿಣಿ ಕೊಪ್ಪಳ, ಸರೋಜಮ್ಮ ಮೇಗಳಮಠ, ನಿರ್ಮಲಾ ಕುಲಕರ್ಣಿ, ಸೈನಿಕರಾದ ರಜೀಸ್, ಲಕ್ಷ್ಮಣ ಅಸುಂಡಿ, ಸೈಯೂಜ್, ಉಮೇಶ ಕಾಮನೂರು, ಇಂಧೂದರ ಸೊಪ್ಪಿಮಠ, ಕಾರ್ಯದರ್ಶಿ ನಿಂಗಪ್ಪ ಗಾಣಿಗೇರ, ಮಲ್ಲಿಕಾರ್ಜುನ ಸಜ್ಜನ ಇದ್ದರು. ನಿವೃತ್ತ ಸೈನಿಕರ ಸಂಘದ ಉಪಾಧ್ಯಕ್ಷ ಶ್ರೀಧರ ಪೊಲೀಸ್ ಪಾಟೀಲ ನಿರೂಪಿಸಿದರು.

ಸೈನಿಕರನ್ನು ಕಾರ್ಗಿಲ್ ವಿಜಯ ದಿವಸ ಸ್ಮರಿಸುತ್ತಾರೆ. ಆದರೆ ನಂತರ ಮರೆತು ಬಿಡುತ್ತಾರೆ. ಸೈನಿಕರು ನಿವೃತ್ತರಾದ ಮೇಲೆ ಅವರಿಗೆ ದೊರೆಯಬೇಕಾದ ಗೌರವ ದೊರೆಯುತ್ತಿಲ್ಲ
ಮಾರುತಿ ಗೊಂದಿ ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.