ADVERTISEMENT

ಜಿಲ್ಲೆಯಲ್ಲಿ 8 ‍ಪ್ರಕರಣ ಕೋವಿಡ್‌–19 ಪತ್ತೆ

ಇಬ್ಬರು ವೈದ್ಯಕೀಯ ಸಿಬ್ಬಂದಿ, ಮಹಿಳಾ ಪೊಲೀಸ್ ಪೇದೆಗೆ ದೃಢ

​ಪ್ರಜಾವಾಣಿ ವಾರ್ತೆ
Published 8 ಜುಲೈ 2020, 14:02 IST
Last Updated 8 ಜುಲೈ 2020, 14:02 IST

ಕೊಪ್ಪಳ: ಜಿಲ್ಲೆಯಲ್ಲಿ ಬುಧವಾರ 8 ಪ್ರಕರಣಕರೊನಾ ಪ್ರಕರಣ ಕಂಡುಬಂದಿವೆ. ಕೊಪ್ಪಳ ತಾಲ್ಲೂಕಿನಲ್ಲಿಯೇ 7 ಪ್ರಕರಣ ಪತ್ತೆಯಾಗಿದ್ದು, ಜನತೆಯಲ್ಲಿ ಆತಂಕ ಹೆಚ್ಚಾಗಿದೆ. ಒಂದು ಮಾತ್ರ ಗಂಗಾವತಿಯದ್ದಾಗಿದೆ.

ಈ ಪೈಕಿ ಇಬ್ಬರೂ ವೈದ್ಯಕೀಯ ಸಿಬ್ಬಂದಿ ಹಾಗೂ ಒಬ್ಬ ಮಹಿಳಾ ಪೊಲೀಸ್‌ ಕೋವಿಡ್–19 ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು 157 ಪ್ರಕರಣ ವರದಿಯಾಗಿವೆ. ಕೊಪ್ಪಳ ನಗರದಲ್ಲಿ 4, ಹಿಟ್ನಾಳ್‌, ಮುನಿರಾಬಾದ್‌ ಹಾಗೂ ಹೊಸ ಗೊಂಡಬಾಳದಲ್ಲಿ ತಲಾ ಒಂದು ಪ್ರಕರಣ ಬಂದಿವೆ.

ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೊಪ್ಪಳ, ಗಂಗಾವತಿ, ಕುಷ್ಟಗಿಯಲ್ಲಿ ಸ್ವಯಂ ಪ್ರೇರಿತ ಲಾಕ್‌ಡೌನ್‌ ಆರಂಭವಾಗಿದೆ. ಕೊಪ್ಪಳ ಆಯುರ್ವೇದಿಕ್‌ ಆಸ್ಪತ್ರೆಯನ್ನು ಸೀಲ್‌ಡೌನ್‌ ಮಾಡಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.