ADVERTISEMENT

ಆಲಿಕಲ್ಲು, ಗಾಳಿ ಮಳೆಗೆ ನೆಲಕಚ್ಚಿದ ಬೆಳೆ

​ಪ್ರಜಾವಾಣಿ ವಾರ್ತೆ
Published 23 ಮೇ 2023, 14:13 IST
Last Updated 23 ಮೇ 2023, 14:13 IST
ಕುಕನೂರು ತಾಲ್ಲೂಕಿನ ಗೊರ್ಲೇಕೊಪ್ಪ  ಗ್ರಾಮದಲ್ಲಿ ಭಾನುವಾರ ಸುರಿದ ಮಳೆಗೆ ಹಾನಿಗೊಳಗಾದ ಪಪಾಯಿ ಬೆಳೆ 
ಕುಕನೂರು ತಾಲ್ಲೂಕಿನ ಗೊರ್ಲೇಕೊಪ್ಪ  ಗ್ರಾಮದಲ್ಲಿ ಭಾನುವಾರ ಸುರಿದ ಮಳೆಗೆ ಹಾನಿಗೊಳಗಾದ ಪಪಾಯಿ ಬೆಳೆ    

ಕುಕನೂರು: ತಾಲ್ಲೂಕಿನ ವಿವಿಧೆಢೆಗಳಲ್ಲಿ ಭಾನುವಾರ ರಾತ್ರಿ ಆಲಿಕಲ್ಲು ಮಳೆ ಹಾಗೂ ಬಿರುಸಿನ ಗಾಳಿಯಿಂದ ಅನೇಕ ಗ್ರಾಮಗಳಲ್ಲಿ ರೈತರ ಬೆಳೆಗಳಾದ ಬಾಳೆ, ಮಾವು, ಪಪಾಯಿ ಬೆಳೆ ನೆಲಕ್ಕೆ ಉರುಳಿದ್ದು, ಕೆಲವು ಮನೆಗಳ ಛತ್ತ ಹಾರಿದ್ದು, ಪ್ರಾಣ ಹಾನಿಯಾಗಿಲ್ಲ.

ತಾಲ್ಲೂಕಿನ ಇಟಗಿ ಗ್ರಾಮದಲ್ಲಿ ಬಾಳೆ ಹಾಗೂ ಮಾವು ಬೆಳೆಯು ಗಾಳಿ, ಮಳೆಗೆ ಗಿಡದಲ್ಲಿದ್ದ ಮಾವಿನ ಕಾಯಿಗಳು ನೆಲಕ್ಕೆ ಬಿದ್ದು ಅಪಾರ ಪ್ರಮಾಣದ ಹಾನಿಯಾಗಿದೆ.

ಗೊರ್ಲೆಕೊಪ್ಪ ಗ್ರಾಮದ ಪಪ್ಪಾಯಿ ಬೆಳೆ ಸಂಪೂರ್ಣ ಹಾನಿಯಾಗಿದೆ. ಗಾವರಾಳ ಗ್ರಾಮದಲ್ಲಿ ಮನೆಯೊಂದರ ಮೇಲ್ಚಾವಣಿ ಕುಸಿದು ಬಿದ್ದಿದೆ. ಪಟ್ಟಣದ ರಾಯರೆಡ್ಡಿ ಕಾಲೊನಿಯಲ್ಲಿ ನೀಲಗಿರಿ ಮರ ಟಂಟಂ ಹಾಗೂ ಕಾರ ಮೆಲೆ ಉರುಳಿ ವಾಹಗಳು ಜಖಂ ಗೊಂಡವೆ. ಹರಿಶಂಕರ ಬಂಡಿ ರಸ್ತೆಯ ಪಕ್ಕದಲ್ಲಿ ವಿದ್ಯುತ್ ಕಂಬ ಬಿದ್ದಿದ್ದು, ತಹಶೀಲ್ದಾರ್‌ ನೀಲಪ್ರಭ ಅವರ ಹಾನಿಯಾದ ಸ್ಥಳಿಗಳಿಗೆ ಭೇಟಿ ನೀಡಿ, ಸಂತ್ರಸ್ಥರಿಗೆ ಸೂಕ್ತ ಪರಿಹಾರ ನೀಡಲಾಗುವುದು ಎಂದರು.

ADVERTISEMENT
ಕುಕನೂರಿನ ರಾಯರಡ್ಡಿ ಕಾಲೋನಿಯಲ್ಲಿ ಭಾನುವಾರ ಗಾಳಿ ಮಳೆಗೆ ನೀರಲಗಿರಿ ಮರ ಉರುಳಿ ಜಖಂಗೊಂಡ  ಟಂ ಟಂ ಕಾರು
ಕುಕನೂರು ತಾಲ್ಲೂಕಿನ ಇಟಗಿ ಗ್ರಾಮದಲ್ಲಿ ಭಾನುವಾರ ರಾತ್ರಿ ಸುರಿದ ಮಳೆಗೆ ನೇಲಕ್ಕೆ ಬಿದ್ದ ಬಾಳೆ ಬೆಳೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.