ADVERTISEMENT

ಗಂಗಾವತಿಯಲ್ಲಿ ಭಾರಿ ಮಳೆ: ಮೆಕ್ಕೆಜೋಳ ಬೆಳೆ ಹಾನಿ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2020, 14:01 IST
Last Updated 12 ಅಕ್ಟೋಬರ್ 2020, 14:01 IST
ಗಂಗಾವತಿ ತಾಲ್ಲೂಕಿನ ಹಣವಾಳ ಸಮೀಪದ ಗಾಂಧಿ ನಗರದಲ್ಲಿ ಭಾನುವಾರ ಸಂಜೆ ಸುರಿದ ಮಳೆಗೆ ಮೆಕ್ಕೆಜೋಳ ಬೆಳೆ ಜಲಾವೃತವಾಗಿದೆ
ಗಂಗಾವತಿ ತಾಲ್ಲೂಕಿನ ಹಣವಾಳ ಸಮೀಪದ ಗಾಂಧಿ ನಗರದಲ್ಲಿ ಭಾನುವಾರ ಸಂಜೆ ಸುರಿದ ಮಳೆಗೆ ಮೆಕ್ಕೆಜೋಳ ಬೆಳೆ ಜಲಾವೃತವಾಗಿದೆ   

ಗಂಗಾವತಿ: ನಗರ ಹಾಗೂ ತಾಲ್ಲೂಕಿನಾದ್ಯಂತ ಭಾನುವಾರ ಸಂಜೆ ಸುರಿದ ಧಾರಾಕಾರ ಮಳೆಗೆ ಹಲವು ಗ್ರಾಮಗಳಲ್ಲಿ ಬೆಳೆ ನಾಶವಾಗಿದೆ.

ತಾಲ್ಲೂಕಿನ ಹಣವಾಳ ಸಮೀಪದ ಗಾಂಧಿ ನಗರದಲ್ಲಿ ನಾಲೆಗಳು ತುಂಬಿ ಹರಿದ ಪರಿಣಾಮ ಸುಮಾರು 10 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಮೆಕ್ಕೆಜೋಳ ಬೆಳೆ ನೀರಿಗೆ ಆಹುತಿಯಾಗಿದೆ. ಮರಕುಂಬಿ ಹಾಗೂ ಗುಳದಾಳ ಭಾಗದಲ್ಲಿ ಭತ್ತ ನೆಲಕ್ಕುರುಳಿದೆ.

ಎಲ್ಲೆಲ್ಲಿ ಎಷ್ಟು ಮಳೆ: ಗಂಗಾವತಿ ವ್ಯಾಪ್ತಿಯಲ್ಲಿ 14.5 ಮಿ.ಮೀ ಮಳೆಯಾಗಿದೆ. ವೆಂಕಟಗಿರಿ ವ್ಯಾಪ್ತಿಯಲ್ಲಿ 11.2 ಮಿ.ಮೀ, ವಡ್ಡರಹಟ್ಟಿ ವ್ಯಾಪ್ತಿಯಲ್ಲಿ 10 ಮಿ.ಮೀ, ಕನಕಗಿರಿ ವ್ಯಾಪ್ತಿಯಲ್ಲಿ 4.2 ಮಿ.ಮೀ, ಹುಲಿಹೈದರ್‌ ವ್ಯಾಪ್ತಿಯಲ್ಲಿ 6.7 ಮಿ.ಮೀ, ನವಲಿ ವ್ಯಾಪ್ತಿಯಲ್ಲಿ 2.4 ಮಿ.ಮೀ, ಕಾರಟಗಿ ವ್ಯಾಪ್ತಿಯಲ್ಲಿ 3.2 ಮಿ.ಮೀ, ಸಿದ್ದಾಪುರ ವ್ಯಾಪ್ತಿಯಲ್ಲಿ 1 ಮಿ.ಮೀ ಮಳೆಯಾದ ವರದಿಯಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.