
ಪ
ಯಲಬುರ್ಗಾ: ಕೊಪ್ಪಳದ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ತಾಲ್ಲೂಕಿನ ಗೆದಗೇರಿ ಭಕ್ತರು ರೊಟ್ಟಿ, ಅಕ್ಕಿ, ದವಸ ಧಾನ್ಯಗಳನ್ನು ಮೆರವಣಿಗೆ ಮೂಲಕ ಮಠಕ್ಕೆ ಒಯ್ದು ಸಮರ್ಪಿಸಿದರು.
ಗ್ರಾಮದ ಭಕ್ತರು ತಮ್ಮ ತಮ್ಮ ಮನೆಯಲ್ಲಿ ಮಾಡಿದ ರೊಟ್ಟಿಗಳನ್ನು ಸಂಗ್ರಹಿಸಿಕೊಂಡಿದ್ದಾರೆ. ಹಾಗೆಯೇ ಅಕ್ಕಿಯ ಮೂಟೆಗಳನ್ನು ಇದೇ ವೇಳೆ ಭಕ್ತರು ದೇಣಿಗೆಯಾಗಿ ನೀಡಿದ್ದಾರೆ. ಟ್ರ್ಯಾಕ್ಟರ್ ಮೂಲಕ ಗವಿಮಠಕ್ಕೆ ನೀಡಿದ್ದಾರೆ. ಗ್ರಾಮದ ಭಜನಾ ತಂಡದ ಸದಸ್ಯರು ಹಾಗೂ ಮುಖಂಡರು ನೇತೃತ್ವ ವಹಿಸಿದ್ದಾರೆ.
ಗ್ರಾಮದ ರುದ್ರಪ್ಪ ನಡುಲಮನಿ, ಶೇಖಪ್ಪ ಹಿರೇಮನಿ, ಹುಚ್ಚಪ್ಪ ಹಿರೇಮನಿ, ರುದ್ರಪ್ಪ ಹೊಸಮನಿ, ಹನಮಪ್ಪ ದೊಡ್ಡಮನಿ, ಶಿವಪ್ಪ ಹಿರೇಮನಿ, ಹನುಮಪ್ಪ ಹಿರೇಮನಿ, ರುದ್ರಪ್ಪ ದೊಡ್ಡಮನಿ, ದುರಗಪ್ಪ ಪೂಜಾರ, ದೇವಪ್ಪ ಹರಿಜನ, ಮಾರುತಿ ದೊಡ್ಡಮನಿ, ಸಂತೋಷ ಟೆಂಗುಂಟಿ, ಶರಣಪ್ಪ ಹಿರೇಮನಿ, ಶಿವರಾಜ ದೊಡ್ಡಮನಿ ಇದ್ದರು.