
ಗಂಗಾವತಿ: ಇಲ್ಲಿನ ಲಯನ್ಸ್ ಐಎಂಎ ಸಭಾಂಗಣದಲ್ಲಿ ಭಾನುವಾರ ಭಾರತೀಯ ವೈದ್ಯಕೀಯ ಸಂಘ ಹಾಗೂ ಲಯನ್ಸ್ ಕ್ಲಬ್ ಸಹಯೋಗದಲ್ಲಿ ವಿಶ್ವ ಮಧುಮೇಹ ದಿನಾಚರಣೆ ನಿಮಿತ್ತ ಉಚಿತ ಮಧುಮೇಹ ತಪಾಸಣೆ ಕಾರ್ಯಕ್ರಮ ಜರುಗಿತು.
ಹುಬ್ಬಳ್ಳಿ ಖ್ಯಾತ ವೈದ್ಯ ಡಾ.ಜಿ.ಬಿ.ಸತ್ತೂರ್ ಅವರು ಮಧು ಮೇಹದ ಬಗ್ಗೆ ರೋಗಿಗಳಿಗೆ ಮಾಹಿತಿ ನೀಡಿದರು.
ಜಿಲ್ಲಾ ಹೆಚ್ಚುವರಿ ಹಾಗೂ ಸೆಷನ್ಸ್ ನ್ಯಾಯಾಧೀಶ ಸದಾನಂದ ನಾಯ್ಕ, ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಮಲ್ಲನಗೌಡ ಪಾಟೀಲ, ಲಯನ್ಸ್ ಕ್ಲಬ್ ಅಧ್ಯಕ್ಷ ಡಾ.ಶಿವಕುಮಾರ ಮಾಲಿಪಾಟೀಲ ಮಾತನಾಡಿದರು.
ಸಂವಾದ ಕಾರ್ಯಕ್ರಮದಲ್ಲಿ ನಗರದ ಹಲವು ಸಂಘಟನೆಗಳು ಭಾಗವಹಿಸಿದ್ದವು. ಮಧುಮೇಹ ರೋಗಿಗಳು ಡಾ.ಸತ್ತೂರ್ ಅವರಿಗೆ ಮಧುಮೇಹದ ಕುರಿತು ಪ್ರಶ್ನೆಗಳು ಹಾಕಿ ಸಲಹೆಗಳು ಪಡೆದರು.
ನಂತರ 300ಕ್ಕೂ ಹೆಚ್ಚು ಜನರಿಗೆ ರಕ್ತ ಆರೋಗ್ಯ ತಪಾಸಣೆ ನಡೆಸಲಾಯಿತು.
ಹಿರಿಯ ವೈದ್ಯ ಡಾ.ಚಂದ್ರಪ್ಪ, ಡಾ.ಸೋಮರಾಜು, ಡಾ. ಮಲ್ಲನಗೌಡ, ಡಾ.ಮಧುಸೂದನ್, ಡಾ.ಸತೀಶ ರಾಯ್ಕರ್, ಡಾ.ವಿಜಯಗೌಡರ್, ಡಾ.ಮಗದಾಳ್, ಡಾ.ಸುನೀಲ್ ಅರಳಿ, ಹಿರಿಯ ವಕೀಲ ಸಿದ್ದನಗೌಡ, ವಕೀಲರ ಸಂಘ ಅಧ್ಯಕ್ಷ ಎಸ್.ಎನ್.ನಾಯಕ, ಲಯನ್ಸ್ ಕ್ಲಬ್ ಕಾರ್ಯದರ್ಶಿ ಜಂಬಣ್ಣ ಐಲಿ, ಖಜಾಂಚಿ ಶಿವಪ್ಪಗಾಳಿ, ಐಎಂಎ ಮಹಿಳಾ ಘಟಕದ ಅಧ್ಯಕ್ಷ ಡಾ.ಅನಿತಾ, ಡಾ.ಅಕ್ಷತಾ ಸೇರಿ ಯೋಗ ಸಮಿತಿ, ರೋಟರಿ ಕ್ಲಬ್ ಸದಸ್ಯರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.