ADVERTISEMENT

ಗಂಗಾವತಿ: ಅಂಬೇಡ್ಕರ್‌ ಮೂರ್ತಿ ಹೋಲುವ ಗಣೇಶ ಮೂರ್ತಿ, ದೂರು ದಾಖಲು

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2022, 12:31 IST
Last Updated 2 ಸೆಪ್ಟೆಂಬರ್ 2022, 12:31 IST
ವಿನಾಯಕ ಸ್ನೇಹವೃಂದ ಯುವಕ ಮಂಡಳಿ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿ
ವಿನಾಯಕ ಸ್ನೇಹವೃಂದ ಯುವಕ ಮಂಡಳಿ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿ   

ಗಂಗಾವತಿ (ಕೊಪ್ಪಳ ಜಿಲ್ಲೆ): ಇಲ್ಲಿನ ಅಂಬೇಡ್ಕರ್ ನಗರದಲ್ಲಿ ವಿನಾಯಕ ಸ್ನೇಹವೃಂದ ಯುವಕ ಮಂಡಳಿ ಡಾ. ಬಿ.ಆರ್‌. ಅಂಬೇಡ್ಕರ್ ಅವರನ್ನು ಹೋಲುವ ರೀತಿಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಗಾವತಿ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಪರಿಶಿಷ್ಟ ಸಂಘಟನೆಯ ಹೋರಾಟಗಾರ ಹುಲಿಗಪ್ಪ ಮಾಗಿ ಅವರು ವಿನಾಯಕ ಸ್ನೇಹವೃಂದ ಯುವಕ ಮಂಡಳಿ (ಮಾದಿಗ ಸಮಾಜ) ಅಂಬೇಡ್ಕರ್ ರೂಪದ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ, ಅವರಿಗೆ ಅಪಮಾನ ಮಾಡಿದೆ ಎಂದು ದೂರಿದ್ದಾರೆ.

ಗಣೇಶ ಮೂರ್ತಿ ಕಾಲಿನಿಂದ ಕುತ್ತಿಗೆ ತನಕ ಅಂಬೇಡ್ಕರ್ ರೂಪ ಹೊಂದಿದ್ದು, ರುಂಡ ಮಾತ್ರ ಗಣೇಶನದ್ದಾಗಿದೆ. ಯುವಕ ಮಂಡಳಿ ಸದಸ್ಯರು ಗಲಭೆ ಸೃಷ್ಟಿಸುವ ಉದ್ದೇಶದಿಂದಲೇ ಈ ರೀತಿಯ ಮೂರ್ತಿ ಪ್ರತಿಷ್ಠಾಪಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ADVERTISEMENT

ಪೊಲೀಸರು ಕೂಡಲೇ ಗಣೇಶ ಯುವಕ ಮಂಡಳಿ ಸದಸ್ಯರನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.