ADVERTISEMENT

ಕಾರಟಗಿ: ಏಷ್ಯನ್ ಗೇಮ್ಸ್ ಕಂಚು ವಿಜೇತೆ ನಂದಿನಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2023, 15:51 IST
Last Updated 18 ಅಕ್ಟೋಬರ್ 2023, 15:51 IST
ಕಾರಟಗಿಯಲ್ಲಿ ಕಸಾಪ ಮತ್ತಿತರ ಸಂಘಟನೆಯವರು ಏಷ್ಯನ್ ಗೇಮ್ಸ್‌ನಲ್ಲಿ ಕಂಚು ಪದಕ ಪಡೆದ ನಂದಿನಿಗೆ ಮಂಗಳವಾರ ಸನ್ಮಾನಿಸಿದರು
ಕಾರಟಗಿಯಲ್ಲಿ ಕಸಾಪ ಮತ್ತಿತರ ಸಂಘಟನೆಯವರು ಏಷ್ಯನ್ ಗೇಮ್ಸ್‌ನಲ್ಲಿ ಕಂಚು ಪದಕ ಪಡೆದ ನಂದಿನಿಗೆ ಮಂಗಳವಾರ ಸನ್ಮಾನಿಸಿದರು   

ಕಾರಟಗಿ: ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ 19ನೇ ಏಷ್ಯನ್ ಗೇಮ್ಸ್‌ನ ಮಹಿಳೆಯರ ಹೆಪ್ಟಾಥ್ಲಾನ್ 800 ಮೀಟರ್ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದ ನಂದಿನಿ ಅಗಸರ ಅವರನ್ನು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಮಡಿವಾಳ ಸಮಾಜದವರು ಮಂಗಳವಾರ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಕಸಾಪ ತಾಲ್ಲೂಕಾಧ್ಯಕ್ಷ ಶರಣಪ್ಪ ಕೋಟ್ಯಾಳ ಮಾತನಾಡಿ, ನಂದಿನಿ ಅಗಸರ ಸಾಧನೆ ಅಚ್ಚರಿದಾಯಕ. ನಂದಿನಿಯ ಸಾಧನೆ ಇತರರಿಗೆ ಸ್ಫೂರ್ತಿ’ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಸವರಾಜ್ ರ‍್ಯಾವಳದ ಮಾತನಾಡಿ, ‘ಕ್ರೀಡಾ ಮನೋಭಾವ ಮತ್ತು ಶ್ರೇಷ್ಠತೆಯನ್ನು ಅಳವಡಿಸಿಕೊಂಡಿರುವ ನಂದಿನಿ, ಒಲಿಂಪಿಕ್ಸ್ ಕ್ರೀಡೆಯಲ್ಲಿ ಸಾಧನೆ ಮೆರೆಯಲಿ’ ಎಂದರು.

ಸನ್ಮಾನಿತೆ ನಂದಿನಿ ಮಾತನಾಡಿ, ಬಡತನದೊಂದಿಗೆ ಈ ಸಾಧನೆ ಮೆರೆದಿರುವುದರ ಹಿಂದಿನ ರೋಚಕ ಕಥೆಯ ಅನಾವಣಗೊಳಿಸಿದರು. ಪದಕ ಪಡೆದಿರುವುದು ನನ್ನ ಮತ್ತು ನನ್ನ ಕುಟುಂಬಕ್ಕೊಂದೇ ಅಲ್ಲ, ದೇಶಕ್ಕೂ ಕೀರ್ತಿ ಬಂದಿದೆ. ಇದರ ಹಿಂದೆ ಅನೇಕರ ಶ್ರಮ, ಸಹಕಾರ ದೊಡ್ಡದಿದೆ. ಅವರೆಲ್ಲರಿಗೂ ಸದಾ ಕೃತಜ್ಞತೆ ಸಲ್ಲಿಸಿಯೇ ಮುಂದೆ ಸಾಧನೆಯ ಹಾದಿಯತ್ತ ಪಯಣ ಬೆಳೆಸುವೆ’ ಎಂದರು.

ADVERTISEMENT

ನಂದಿನಿಯವರ ಪೋಷಕರು ಹೈದರಾಬಾದ್‌ನಲ್ಲಿ ನೆಲೆಸಿದ್ದಾರೆ. ಕಾರಟಗಿಯು ನಂದಿನಿ ಅವರ ಅಜ್ಜಿಯ ಮನೆಯಾಗಿದೆ.

ಪ್ರಮುಖರಾದ ಶರಣಪ್ಪ ಕಾಯಿಗಡ್ಡಿ, ರಮೇಶ ಜನೌಷಧಿ, ಶಿವು ಮಾಸ್, ಮಡಿವಾಳ ಸಮಾಜ ಚಂದ್ರು ನಾಗನಹಳ್ಳಿ, ಹೊನ್ನಪ್ಪ, ರಾಮಣ್ಣ , ಮರಿಯಪ್ಪ, ವೀರೇಶ, ರಾಜಾ, ದೇವಣ್ಣ, ಶರಣಪ್ಪ, ಆನಂದ, ದೇವರಾಜ್, ಯಮನೂರ, ಸುಖಮನಿ ಶರಣಬಸವೇಶ್ವರ ವಿದ್ಯಾ ಸಂಸ್ಥೆಯ ಮುಖ್ಯಗುರುಗಳಾದ ಮಹಾಂತೇಶ್ ಗದ್ದಿ, ವೀರೇಶ್ ಮ್ಯಾಗೇರಿ, ಅಮರೇಶ್ ಪಾಟೀಲ್, ದೈಹಿಕ ಶಿಕ್ಷಕ ಗಿರೀಶ್ ಯರಡೋಣ, ಬಸವರಾಜ್ ಸಿದ್ದಾಪುರ, ಸೂರಿ ಭೋವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.