ADVERTISEMENT

ಕುಷ್ಟಗಿ | ‘ವಿದ್ಯಾರ್ಥಿಗಳಿಗೆ ಕ್ರೀಡೆಗಳಲ್ಲಿ ಉಚಿತ ತರಬೇತಿ’

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2025, 6:49 IST
Last Updated 6 ಡಿಸೆಂಬರ್ 2025, 6:49 IST
ಕುಷ್ಟಗಿ ಎಸ್‌.ವಿ.ಮೆಮೋರಿಯಲ್ ಶಾಲೆಯಲ್ಲಿನ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮಕ್ಕಳು
ಕುಷ್ಟಗಿ ಎಸ್‌.ವಿ.ಮೆಮೋರಿಯಲ್ ಶಾಲೆಯಲ್ಲಿನ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮಕ್ಕಳು   

ಕುಷ್ಟಗಿ: ಇಲ್ಲಿನ ಮಕ್ಕಳಲ್ಲಿ ವಿವಿಧ ಕ್ರೀಡೆಗಳಲ್ಲಿ ಆಸಕ್ತಿ ಇದೆ. ಅವರ ಪ್ರತಿಭೆ ಗುರುತಿಸಿ ಅಗತ್ಯ ಸೌಲಭ್ಯ, ಸೂಕ್ತ ತರಬೇತಿ ಮತ್ತು ಮಾರ್ಗದರ್ಶನ ನೀಡಿದರೆ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಸಾಧನೆ ಮಾಡುವ ಸಾಮರ್ಥ್ಯವಿದೆ’ ಎಂದು ಭಾರತೀಯ ಪೆಂಕಾಕ್‌ ಸಿಲಾಟ್‌ ಸಂಸ್ಥೆ ತಾಂತ್ರಿಕ ನಿರ್ದೇಶಕ ಅಬ್ದುಲ್‌ ರಜಾಕ್‌ ಟೇಲರ್ ಹೇಳಿದರು.

ಪಟ್ಟಣದ ಎಸ್‌.ವಿ ಮೆಮೋರಿಯಲ್‌ ಪಬ್ಲಿಕ್‌ ಶಾಲೆಯಲ್ಲಿನ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.

‘ಜಂಪ್‌ರೋಪ್‌ ಸ್ಪರ್ಧೆಯಲ್ಲಿ ಇಲ್ಲಿನ ಮಕ್ಕಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುತ್ತಿದ್ದಾರೆ. ಹಾಗಾಗಿ ಜಂಪ್‌ರೋಪ್‌ ಹಾಗೂ ಒಳಾಂಗಣ ಕ್ರೀಡೆಗಳಲ್ಲಿ ಪ್ರೋತ್ಸಾಹಿಸಲು ಹನುಮಸಾಗರದಲ್ಲಿ ಹಾಲಿ, ಮಾಜಿ ಶಾಸಕರ ಮತ್ತು ದಾನಿಗಳ ನೆರವಿನೊಂದಿಗೆ ₹1.55 ಕೋಟಿ ವೆಚ್ಚದಲ್ಲಿ ಕ್ರೀಡಾಂಗಣ ನಿರ್ಮಿಸಲಾಗಿದೆ. ದೇಶದ ವಿವಿಧ ಭಾಗದ 30 ವಿದ್ಯಾರ್ಥಿಗಳು ವಿವಿಧ ಕ್ರೀಡೆಗಳಲ್ಲಿ ತರಬೇತಿ ಪಡೆಯುತ್ತಿದ್ದಾರೆ’ ಎಂದರು.

ADVERTISEMENT

‘ಒಳಾಂಗಣ ಕ್ರೀಡಾಂಗಣದಲ್ಲಿ ಸುಮಾರು 200 ವಿದ್ಯಾರ್ಥಿಗಳಿಗೆ ಏಕಕಾಲಕ್ಕೆ ವಿವಿಧ ಕ್ರೀಡೆಗಳಲ್ಲಿ ತರಬೇತಿ ನೀಡುವ ಸೌಲಭ್ಯಗಳಿದೆ. ನಮ್ಮ ಭಾಗದ ಶಾಲಾ ಮಕ್ಕಳಿಗೆ ಕ್ರೀಡೆಗಳಲ್ಲಿ ಉಚಿತ ತರಬೇತಿ ನೀಡಲು ಸಂಸ್ಥೆ ಸಿದ್ಧವಿದೆ’ ಎಂದರು.

ಪೆಂಕಾಕ್‌ ಸಿಲಾಟ್‌ ತರಬೇತುದಾರ ಟೆಕ್‌ಚಾನ್‌ ಬಾಯಿಚಾ ಮಾತನಾಡಿ, ಸಮರ ಕಲೆ ಬಗ್ಗೆ ಮಕ್ಕಳು ಹಾಗೂ ಪಾಲಕರು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಯಾವುದಾದರೂ ಒಂದು ಸಮರ ಕಲೆಯಲ್ಲಿ ಪರಿಣಿತಿ ಪಡೆಯುವುದು ಅಗತ್ಯವಾಗಿದೆ. ಅಲ್ಲದೆ ಸಮರ ಕಲೆ ಮಕ್ಕಳಲ್ಲಿ ಹೆಚ್ಚಿನ ಆತ್ಮವಿಶ್ವಾಸ ತುಂಬುತ್ತದೆ’ ಎಂದು ಹೇಳಿದರು.

ಶಾಲೆಯ ಪ್ರಾಚಾರ್ಯ ಮಹಾದೇವ ಮದಾಳೆ ಮಾತನಾಡಿದರು. ಸಂಸ್ಥೆಯ ಹಣಕಾಸು ಅಧಿಕಾರಿ ಅರುಣ್ ಕರ್ಮಾಕರ್, ದೈಹಿಕ ಶಿಕ್ಷಣ ಶಿಕ್ಷಕ ಸಂತೋಷ್, ಅವಿನಾಶ, ರಮೇಶ ಸೇರಿದಂತೆ ಶಿಕ್ಷಕರು, ಸಿಬ್ಬಂದಿ ಮತ್ತು ಪಾಲಕರು ಇದ್ದರು.

ಕುಷ್ಟಗಿ ಎಸ್‌.ವಿ. ಮೆಮೋರಿಯಲ್ ಪಬ್ಲಿಕ್‌ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟಕ್ಕೆ ಅಬ್ದುಲ್‌ ರಜಾಕ್‌ ಟೇಲರ್‌ ಚಾಲನೆ ನೀಡಿದರು

ಹನುಮಸಾಗರದಲ್ಲಿ ₹1.55 ಕೋಟಿ ವೆಚ್ಚದ ಒಳಾಂಗಣ ಕ್ರೀಡಾಂಗಣ ಜಂಪ್‌ರೋಪ್‌ ಕ್ರೀಡೆಯಲ್ಲಿ ಮಕ್ಕಳ ಸಾಧನೆ ಅನನ್ಯ ಸಮರ ಕಲೆಗೆ ಮಕ್ಕಳು, ಪಾಲಕರಲ್ಲಿ ಹೆಚ್ಚಿದ ಆಸಕ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.