ಕನಕಗಿರಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ಸರ್ಕಾರಿ ಕಚೇರಿ ಹಾಗೂ ಶಾಲಾ ಕಾಲೇಜುಗಳಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನವನ್ನು ಗುರುವಾರ ಆಚರಿಸಲಾಯಿತು.
ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ವಿಶ್ವನಾಥ ಮುರುಡಿ, ಕಂದಾಯ ನಿರೀಕ್ಷಕ ಮಂಜುನಾಥ ಹಿರೇಮಠ, ನೌಕರರ ಸಂಘದ ಕೋಶಾಧ್ಯಕ್ಷ ಗುರುಲಿಂಗಯ್ಯ ಪೂಜಾರಿ, ಸಿಬ್ಬಂದಿ ಅಮರೇಶ, ಅಮರ ಟಿ. ಇದ್ದರು.
ತಾ.ಪಂ. ಕಚೇರಿಯಲ್ಲಿ ಪ್ರಭಾರ ಇಒ ಕೆ. ರಾಜಶೇಖರ ಅವರು ಇಬ್ಬರೂ ಮಹನೀಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿದರು. ಯೋಜನಾಧಿಕಾರಿ ಹುಲಗಪ್ಪ, ಹನುಮವ್ವ, ಶಿವಕುಮಾರ ಇದ್ದರು.
ಪ.ಪಂ. ಕಚೇರಿಯಲ್ಲಿ ನಡೆದ ಜಯಂತಿಯಲ್ಲಿ ಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ, ಪ್ರಮುಖರಾದ ಅನ್ನು ಚಳ್ಳಮರದ, ಸಿಬ್ಬಂದಿಗಳಾದ ಯಮನೂರಪ್ಪ, ಹುಸೇನಪ್ಪ, ಪ್ರಕಾಶ ಮಹಿಪತಿ, ವಿಜಯಕುಮಾರ ಗಡಾದ, ಪುರುಷೋತ್ತಮ್ಮ ಪತ್ತಾರ, ವಿಜಯಲಕ್ಷ್ಮಿ ಇದ್ದರು.
ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಜಯಂತಿಯಲ್ಲಿ ಪ್ರಭಾರ ಪ್ರಾಂಶುಪಾಲ ಅಮರೇಶ ದೇವರಾಳ, ಉಪ ಪ್ರಾಂಶುಪಾಲ ಜಗದೀಶ ಹಾದಿಮನಿ ಅವರು ಮಾತನಾಡಿದರು. ಉಪನ್ಯಾಸಕ ಶಿವಪುತ್ರಪ್ಪ ಗಳಪೂಜಿ, ಶಿಕ್ಷಕರಾದ ಬೀಬಿ ಹೂಂ ಸಲಾಂ, ಶಾಮೀದಸಾಬ ಲೈನದಾರ ಹಾಗೂ ಶಿಕ್ಷಕರು, ಸಿಬ್ಬಂದಿ ಇದ್ದರು.
ದ್ಯಾಮವ್ವನಗುಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷೆ ಶಂಶಾದಬೇಗಂ, ಶಿಕ್ಷಕಿ ರಾಜೇಶ್ವರಿ ಭತ್ತದ ಇದ್ದರು.
ತಾಲ್ಲೂಕಿನ ಹಿರೇಖೇಡ ಗ್ರಾ.ಪಂ. ಕಚೇರಿಯಲ್ಲಿ ನಡೆದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಯು. ಮಲ್ಲಿಕಾರ್ಜುನ ಹಾಗೂ ಗ್ರಾಮದ ಮುಖಂಡರಾದ ಬಾರಿಮರದಪ್ಪ ನಡಲಮನಿ, ಹುಲಗಪ್ಪ ದೊಡ್ಡಮನಿ, ಸಿದ್ದಪ್ಪ, ಬಾರಿಮರದಪ್ಪ ಮರಿಯಣ್ಣ, ಹನುಮೇಶ, ಯಂಕೋಬ ಮತ್ತು ಸಿಬ್ಬಂದಿಗಳಾದ ಹೊನ್ನೂರ ಪಾಷ ರವಿಕುಮಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.