ಗಂಗಾವತಿ (ಕೊಪ್ಪಳ): ಹೋಟೆಲ್ ಆರಂಭದ ಪರವಾನಗಿ ಸಂಬಂಧ ಗಂಗಾವತಿ ತಾಲ್ಲೂಕಿನ ಸಾಣಾಪುರ, ಹನುಮನಹಳ್ಳಿ, ಚಿಕ್ಕರಾಂಪುರ ಭಾಗದ ರೆಸಾರ್ಟ್ ಮಾಲೀಕರು ಹಾಗೂ ಜಿಲ್ಲಾ ಉಸ್ತವಾರಿ ಸಚಿವ ಆನಂದ್ ಸಿಂಗ್ ನಡುವೆ ವಾಗ್ವಾದ ನಡೆಯಿತು.
‘ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚಿಸಿ, ಹೋಟೆಲ್ ಪರವಾನಗಿ ಕೊಡಿಸುವ ಬಗ್ಗೆ ತೀರ್ಮಾನಿಸಲಾಗುವುದು. ಇದಕ್ಕ ಸ್ವಲ್ಪ ತಡವಾಗಬಹುದು’ ಎಂದರು.
ಆಗ ಕೆಲ ರೆಸಾರ್ಟ್ ಮಾಲೀಕರು ಹಂಪಿ, ಕಮಲಾಪುರ ವ್ಯಾಪ್ತಿಯಲ್ಲಿ ರೆಸಾರ್ಟ್, ಹೋಟೆಲ್ ಚಾಲ್ತಿಯಲ್ಲಿವೆ. ನಮ್ಮ ಭಾಗದಲ್ಲಿ ಮಾತ್ರ ಏಕೆ ಮುಚ್ಚಿಸಲಾಗಿದೆ’ ಎಂದು ಪ್ರಶ್ನಿಸಿದರು.
‘ಚಾಲ್ತಿಯಲ್ಲಿ ಇರುವ ರೆಸಾರ್ಟ್ ತೋರಿಸಿ. ಕೂಡಲೇ ಮುಚ್ಚಿಸುತ್ತೇನೆ’ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಮಾಲೀಕರು ‘ಕಮಲಾಪುರ ಭಾಗಕ್ಕೆ ಬನ್ನಿ ತೋರಿಸುತ್ತೇವೆ’ ಎಂದು ಪ್ರತ್ಯುತ್ತರ ನೀಡಿದರು.
ಆಗ ಸಚಿವರು ಕೋಪದಿಂದ, ‘ರೆಸಾರ್ಟ್ ಮಾಲೀಕರನ್ನು ಕರೆದುಕೊಂಡು ಹೋಗಿ ಹಂಪಿ, ಕಮಲಾಪುರ ವ್ಯಾಪ್ತಿಯ ರೆಸಾರ್ಟ್, ಹೊಟೇಲ್ ಮುಚ್ಚಿಸಿ’ ಎಂದು ಹಂಪಿ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಿಗೆ ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.