
ಕಾರಟಗಿ: ಶ್ರೀಗುರು ಶಿವಯೋಗಿ ಚನ್ನಬಸವ ಸೇವಾ ಟ್ರಸ್ಟ್ ನೇತೃತ್ವದಲ್ಲಿ ಗಂಗಾವತಿಯ ಚನ್ನಬಸವ ತಾತರ ಜಾತ್ರೆಯ ದಾಸೋಹಕ್ಕೆ ಭಕ್ತರಿಂದ ಸಂಗ್ರಹಿಸಿದ್ದ 5 ಕ್ವಿಂಟಲ್ ಲಾಡು, 2500 ರೊಟ್ಟಿ, ನಗದು, ದವಸ ಧಾನ್ಯಗಳನ್ನು ಮಂಗಳವಾರ ಕಳುಹಿಸಲಾಯಿತು.
ಲಾರಿಯಲ್ಲಿ ಎಲ್ಲವನ್ನೂ ಹಾಕಿ, ಪೂಜೆ ಸಲ್ಲಿಸಿ, ಭಜನೆ ಮಾಡುತ್ತ ಮೆರವಣಿಗೆ ನಡೆಸಿ ಗಂಗಾವತಿಗೆ ಕಳುಹಿಸಲಾಯಿತು.
ಪುರಸಭೆ ಸದಸ್ಯೆ ಸುಪ್ರಿಯಾ ಅರಳಿ, ಟ್ರಸ್ಟ್‌ನ ಸದಸ್ಯೆ ಸುಮಾ ಹಿರೇಮಠ,‘ಜಾತ್ರೆಯ ದಾಸೋಹಕ್ಕೆ ನಮ್ಮ ಭಾಗದ ಅನೇಕ ಭಕ್ತರು ನಮ್ಮ ಟ್ರಸ್ಟ್‌ನ ಕರೆಗೆ ಸ್ಪಂದಿಸಿ, ವಿವಿಧ ರೀತಿಯ ದೇಣಿಗೆ ಸಲ್ಲಿಸಿದ್ದನ್ನು ಕಳುಹಿಸುವ ಮೂಲಕ ನಮ್ಮ ಭಾಗದ ಅಳಿಲು ಸೇವೆ ಸಲ್ಲಿಸಿದ್ದೇವೆ’ ಎಂದರು.
ಟ್ರಸ್ಟ್‌ನ ಅಧ್ಯಕ್ಷ ಶಿವಪ್ಪ ಮಸ್ಕಿ, ಉಪಾಧ್ಯಕ್ಷ ಎಚ್. ಚಾಂದ್‌ಸಿಂಗ್ ರಜಪೂತ, ಪ್ರಧಾನ ಕಾರ್ಯದರ್ಶಿ ಬಸವರಾಜ್ ಚಿನಿವಾಲ ಪ್ರಮುಖರಾದ ಮಾರ್ಕೆಂಡೇಶ ಮರಳಿ, ಕೊಟಗಿ ಮಲ್ಲಪ್ಪ, ಶರಣಪ್ಪ ಮಾವಿನಮಡ್ಗು, ಚಂದ್ರಕಾಂತ ಸಜ್ಜನ್, ಗುಂಜಳ್ಳಿ ವಿರೇಶ, ಅಪ್ಪಾಜೀ ಕೊಟ್ರಪ್ಪ ಸಜ್ಜನ್, ಮುತ್ತಯ್ಯಸ್ವಾಮಿ ಹಿರೇಮಠ, ಮಾರ್ಕಂಡೇಶ ಸೋಮನಾಳ, ರಾಚಪ್ಪ ಬಳಿಗಾರ, ವೀರೇಶಪ್ಪ ಸಂಡೂರ, ಸಿ. ಪಂಪಯ್ಯಸ್ವಾಮಿ, ಅಮರೇಶಪ್ಪ ಕಂದಗಲ್, ನಿರ್ಮಲಾ ಕೊಟಗಿ, ರಾಜೇಶ್ವರಿ ಗಂಜಿ, ಜ್ಞಾನೇಶ್ವರಿ ಚನ್ನಳ್ಳಿಮಠ, ಹಂಪಮ್ಮ ದಿವಟರ್, ಅಂಬಮ್ಮ ಕುಂಬಾರ್, ಸುಮಾ ಅರಳಿ, ಸವಿತಾ ಸಜ್ಜನ್, ಅಮರಮ್ಮ, ಸಾವಿತ್ರಮ್ಮ ಕುರುಗೋಡು, ರಾಜೇಶ್ವರಿ ಹಂಚಿನಳಮಠ, ಈರಮ್ಮ ತಿಮ್ಮಾಪುರ ಇದ್ದರು.