ಲೈಂಗಿಕ ದೌರ್ಜನ್ಯ –ಪ್ರಾತಿನಿಧಿಕ ಚಿತ್ರ
ಗಂಗಾವತಿ: ತಾಲ್ಲೂಕಿನ ಗ್ರಾಮವೊಂದರಲ್ಲಿ ಬಾಲಕಿ ಮೇಲೆ ಬಾಲಕನೊಬ್ಬ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಇಲ್ಲಿನ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಎಫ್‌ಐಆರ್ ದಾಖಲಾಗಿದೆ.
ನಾಲ್ಕು ವರ್ಷದ ಬಾಲಕಿಯ ತಾಯಿ ದೂರು ನೀಡಿದ್ದು ‘ನನ್ನ ಮಗಳು ಅಂಗನವಾಡಿ ಶಾಲೆ ಬಳಿ ಆಡವಾಡುತ್ತಿದ್ದಾಗ ಘಟನೆ ನಡೆದಿದೆ. ಆಕೆಗೆ ಸರಿಯಾಗಿ ಮಾತು ಕೂಡ ಬರುವುದಿಲ್ಲ. ಅಂಗನವಾಡಿ ಕೇಂದ್ರದ ಬಳಿಯಿರುವ ಶೌಚಾಲಯದಲ್ಲಿ ಬಾಲಕ ಲೈಂಗಿಕ ಬಯಕೆಯಿಂದ ಮಗಳ ಮೈ ಕೈ ಮುಟ್ಟಿ ಶೌಚಾಲಯದ ಒಳಗೆ ಕರೆದುಕೊಂಡು ಹೋಗುತ್ತಿದ್ದಾಗ ನಾನು ಚೀರಿದೆನು. ಆಗ ಬಾಲಕ ನನ್ನ ಮಗಳನ್ನು ಶೌಚಾಲಯದಿಂದ ಹೊರಗಡೆ ದಬ್ಬಿ ಒಳಗಡೆ ಚಿಲಕ ಹಾಕಿಕೊಂಡಿದ್ದಾನೆ’ ಎಂದು ದೂರಿದ್ದಾರೆ.
‘ಘಟನೆ ಸೂಕ್ಷ್ಮವಾಗಿದ್ದರಿಂದ ಪೊಲೀಸರಿಗೆ ದೂರು ನೀಡಲು ತೆರಳುವಾಗಲೂ ಬಾಲಕನ ಕುಟುಂಬದವರು ಮಾರ್ಗಮಧ್ಯದಲ್ಲಿ ಅಡ್ಡಗಟ್ಟಿ ಮಗನ ಮೇಲೆ ಪ್ರಕರಣ ದಾಖಲಿಸಿದರೆ ಜೀವಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಒಡ್ಡಿದ್ದಾರೆ’ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಇಲ್ಲಿನ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.