ಕೊಪ್ಪಳ: ಕುಷ್ಟಗಿ ತಾಲ್ಲೂಕು ಕಲಾಲಬಂಡಿ ಗ್ರಾಮದ ಬಾಲಕಿ ಅನುಸುಪ್ರಿತಾ ತಾನು ಕೂಡಿಟ್ಟಿದ್ದ ₹3,683 ಅನ್ನು ಪಿಎಂ ಕೇರ್ಸ್ ನಿಧಿಗೆ ನೀಡಿದ್ದಾಳೆ.
ಒಂದನೇ ತರಗತಿ ಮುಗಿಸಿರುವ ಏಳು ವರ್ಷದ ಈ ಬಾಲಕಿ, ಪಾಲಕರು ಕೊಡುತ್ತಿದ್ದ ಚಿಲ್ಲರೆ ಹಣವನ್ನು 8 ತಿಂಗಳಿನಿಂದ ಹುಂಡಿಯಲ್ಲಿ ಸಂಗ್ರಹಿಸಿಟ್ಟಿದ್ದಳು.
ಸಂಗ್ರಹಗೊಂಡಿದ್ದ ಒಟ್ಟು ₹3,683 ಹಣವನ್ನು ಚೀಲದಲ್ಲಿ ಹಾಕಿಕೊಂಡು ತನ್ನ ತಂದೆ ಚಂದಾಲಿಂಗ ಕಲಾಲಬಂಡಿ ಅವರೊಂದಿಗೆ ತೆರಳಿ ಜಿಲ್ಲಾಧಿಕಾರಿಪಿ.ಸುನೀಲಕುಮಾರ್ ಅವರಿಗೆ ಹಸ್ತಾಂತರಿಸಿದಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.