ಕಾರಟಗಿ: ಸಮೀಪದ ಬೂದಗುಂಪಾ, ಹಾಲಸಮುದ್ರ ಹಾಗೂ ತಿಮ್ಮಾಪುರ ಗ್ರಾಮಗಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸೇರಿದ 1 ಎಕರೆ 10 ಗುಂಟೆ ಜಾಗದ ಒತ್ತುವರಿ ಇತ್ತೀಚೆಗೆ ಮಾಡಲಾಯಿತು. ತಹಶೀಲ್ದಾರ್ ಎಂ. ಕುಮಾರಸ್ವಾಮಿ, ತಾಲ್ಲೂಕು ಪಂಚಾಯಿತಿ ಇಒ ಲಕ್ಷೀದೇವಿ, ಬಿಇಒ ನಟೇಶ ಹಾಗೂ ಪೊಲೀಸ್ ಇನ್‌ಸ್ಟೆಕ್ಟರ್ ಸುಧೀರ್ ಅವರ ಮುಂದಾಳತ್ವದಲ್ಲಿ ಜಂಟಿ ಕಾರ್ಯಾಚರಣೆ ನಡೆಯಿತು.
ಕಾರಟಗಿ: ಸರ್ಕಾರಿ ಶಾಲೆ ಜಮೀನು ಒತ್ತುವರಿ ತೆರವು
ಹೈಡ್ರಾಮಾ: ಬೆಳಿಗಿನ ಜಾವ ಆರಂಭವಾದ ಕಾರ್ಯಾಚರಣೆಗೆ ಸಣ್ಣ ಮಟ್ಟದಲ್ಲಿ ಪ್ರತಿರೋಧ ಎದುರಾಯಿತು. ಗ್ರಾಮದ ಕೆಲವರು ಶಾಲೆಯ ಮೂಲೆಯಲ್ಲಿನ ಮನೆಯೊಂದನ್ನು ಬಿಟ್ಟು ಇನ್ನುಳಿದ ಎಲ್ಲಾ ಬಡವರ, ಪರಿಶಿಷ್ಟ ಸಮುದಾಯದ ಜನರ ಶೆಡ್ ತೆರವು ಮಾಡಲಾಗಿದೆ ಎಂದಿದ್ದರಿಂದ ಅಧಿಕಾರಿಗಳ ಜೊತೆ ವಾಗ್ವಾದ ನಡೆಯಿತು. ಮತ್ತೊಂದು ಸಭೆ ನಡೆಸಿ ಅದನ್ನು ಕೂಡ ತೆರವು ಮಾಡಲಾಗುವುದು ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.