ADVERTISEMENT

ಗ್ರಾ.ಪಂ ಚುನಾವಣೆ ಉತ್ಸಾಹದಿಂದ ಮತ ಚಲಾಯಿಸಿದ ಶತಾಯುಷಿ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2020, 6:19 IST
Last Updated 27 ಡಿಸೆಂಬರ್ 2020, 6:19 IST
ಗಂಗಾವತಿ ತಾಲೂಕಿನ ಶ್ರೀರಾಮನಗರದಲ್ಲಿ ಮತದಾನಕ್ಕೆ ಅಂಗವಿಕಲರೊಬ್ಬರು ಮತ ಚಲಯಿಸಲು ಬಂದರು.
ಗಂಗಾವತಿ ತಾಲೂಕಿನ ಶ್ರೀರಾಮನಗರದಲ್ಲಿ ಮತದಾನಕ್ಕೆ ಅಂಗವಿಕಲರೊಬ್ಬರು ಮತ ಚಲಯಿಸಲು ಬಂದರು.   

ಕೊಪ್ಪಳ: ಗಂಗಾವತಿ ತಾಲ್ಲೂಕಿನಾದ್ಯಂತ ಗ್ರಾ.ಪಂ ಚುನಾವಣೆಯ 2ನೇ ಹಂತದ ಮತದಾನ ಪ್ರಕ್ರಿಯೆ ಬಿರುಸುಗೊಂಡಿದ್ದು, ಮತದಾರರು ಬೆಳಗ್ಗೆಯಿಂದಲೇ ಉತ್ಸಾಹದಿಂದ ಮತ ಚಲಾಯಿಸುತ್ತಿದ್ದಾರೆ.

ತಾಲ್ಲೂಕಿನ ಹೆಬ್ಬಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಗೆ 120 ವರ್ಷದ ಶತಾಯುಷಿ ಕಂಚಿ ಚೌಡಮ್ಮ ಆಗಮಿಸಿ ಮತ ಚಲಾಯಿಸಿದರು.

ಇನ್ನು, ಮೊದಲ ಬಾರಿಗೆ ಮತದಾನ ಮಾಡುವ ಹಕ್ಕನ್ನು ಪಡೆದ ತಾಲ್ಲೂಕಿನ ಶ್ರೀರಾಮನಗರದ ಯುವಕರಿಗೆ ಮತಗಟ್ಟೆಗೆ ಉತ್ಸಾಹದಿಂದ ಆಗಮಿಸಿ ಮತ ಚಲಾಯಿಸಿದರು. ಈ ವೇಳೆ ತಾಲ್ಲೂಕು ಪಂಚಾಯಿತಿ ಇಒ ಡಾ.ಡಿ.ಮೋಹನ್ ಪುಸ್ತಕ ನೀಡಿ ಯುವಕರನ್ನು ಅಭಿನಂದಿಸಿದರು.

ADVERTISEMENT

ಇನ್ನು , ವಿಕಲಚೇತನರು ಹಾಗೂ ವಯಸ್ಸಾದವರಿಗೆ ಎಲ್ಲಾ ಬೂತ್ ಗಳಲ್ಲಿ ವೀಲ್ ಚೇರ್ ಸೌಲಭ್ಯ ವನ್ನು ಒದಗಿಸಿದ್ದು ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.