
ಕೊಪ್ಪಳ: ತಾಲ್ಲೂಕಿನ ಹಲಗೇರಿ ಗ್ರಾಮದಲ್ಲಿ ಭಾನುವಾರ ಶಾಸಕ ರಾಘವೇಂದ್ರ ಹಿಟ್ನಾಳ ₹25 ಲಕ್ಷ ವೆಚ್ಚದಲ್ಲಿ ಉಣ್ಣೆ ಮತ್ತು ಕೈಮಗ್ಗ ಕಟ್ಟಡ ನಿರ್ಮಾಣದ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿದರು.
ನಂತರ ಮಾತನಾಡಿ ‘ಉಣ್ಣೆ ಮತ್ತು ಕೈಮಗ್ಗ ಕ್ಷೇತ್ರವು ರಾಜ್ಯದ ಸಾಂಪ್ರದಾಯಿಕ ಕಲೆಯಾಗಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕತೆಯ ಬೆನ್ನೆಲುಬು ಆಗಿದೆ. ಕೈಮಗ್ಗ ನೇಯ್ಗೆಯನ್ನು ಪ್ರೋತ್ಸಾಹಿಸಲು ಸರ್ಕಾರ ಉಣ್ಣೆ, ಹತ್ತಿ ಹಾಗೂ ರೇಷ್ಮೆ ಕೈಮಗ್ಗಗಳನ್ನು ಖರೀದಿಸಲು ಫಲಾನುಭವಿಗಳಿಗೆ ಶೇ. 50ರಷ್ಟು ಹಾಗೂ ಸಹಕಾರ ಸಂಘಗಳಿಗೆ ಶೇ.75 ಸಹಾಯಧನ ನೀಡುತ್ತಿದೆ ಎಂದರು.
ಕೊಪ್ಪಳ ನಾಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಸನ್ನ ಗಡಾದ, ಗುಡದಪ್ಪ ಹಲಿಗೇರಿ, ಶಂಕರಪ್ಪ ಅಂಗಡಿ, ದೇವಪ್ಪ ವದಗನಾಳ, ಅಶೋಕ ಹಲಗೇರಿ, ನಾಗರಾಜ ಓಜನಹಳ್ಳಿ, ಶರಣಪ್ಪ ಬಿನ್ನಾಳ, ಶಂಭುಲಿಂಗನಗೌಡ ಪಾಟೀಲ್, ಸುರೇಶ ಹಳ್ಳಿಕೇರಿ, ಕರಿಯಪ್ಪ ಹಳ್ಳಿಕೇರಿ, ಹನಮಂತಪ್ಪ ಅಬ್ಬಿಗೇರಿ, ಶರಣಪ್ಪ ಅಬ್ಬಿಗೇರಿ, ಶಂಕರ್ ಸಿಂದೋಗಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.