ADVERTISEMENT

ಕೊಪ್ಪಳ | ವಿಶ್ವದರ್ಜೆಯಲ್ಲಿ ಶಿಲಾಸಮಾಧಿ ಅಭಿವೃದ್ಧಿ: ಎಚ್‌.ಕೆ. ಪಾಟೀಲ

​ಪ್ರಜಾವಾಣಿ ವಾರ್ತೆ
Published 17 ಜೂನ್ 2025, 13:14 IST
Last Updated 17 ಜೂನ್ 2025, 13:14 IST
<div class="paragraphs"><p>ಎಚ್‌.ಕೆ. ಪಾಟೀಲ</p></div>

ಎಚ್‌.ಕೆ. ಪಾಟೀಲ

   

ಕೊಪ್ಪಳ: ‘ವಿಶ್ವ ಪಾರಂಪರಿಕ ತಾತ್ಕಾಲಿಕ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಹಿರೇಬೆಣಕಲ್‌ ಗ್ರಾಮದಲ್ಲಿರುವ ಐದು ಸಾವಿರ ವರ್ಷಗಳಷ್ಟು ಹಳೆಯದಾದ ಶಿಲಾ ಸಮಾಧಿಗಳ ಪ್ರಾಗೈತಿಹಾಸಿಕ ಸ್ಥಳವನ್ನು ವಿಶ್ವ ದರ್ಜೆಯಲ್ಲಿ ಅಭಿವೃದ್ಧಿ ಪಡಿಸಲಾಗುವುದು’ ಎಂದು ಪ್ರವಾಸೋದ್ಯಮ ಸಚಿವ ಎಚ್‌.ಕೆ. ಪಾಟೀಲ ಹೇಳಿದರು.

ಮಂಗಳವಾರ ಹಿರೇಬೆಣಕಲ್‌ ಗ್ರಾಮಕ್ಕೆ ಭೇಟಿ ನೀಡಿದ ಅವರು ‘ವಿಶ್ವ ಪಾರಂಪರಿಕ ಕಾಯಂ ಪಟ್ಟಿಯಲ್ಲಿ ಸ್ಥಾನ ಪಡೆಯಲು ಬೇಕಾಗುವ ಎಲ್ಲ ಕೆಲಸಗಳನ್ನು ಸರ್ಕಾರದಿಂದಲೇ ಮಾಡಲಾಗುವುದು. ಈ ಸ್ಥಳದ ಮಹತ್ವದ ಬಗ್ಗೆ ಬೆಂಗಳೂರಿನ ಜನರಿಗೂ ಗೊತ್ತಾಗುವಂತೆ ಮಾಡಲು ವೆಂಕಟಪ್ಪ ಕಲಾ ಗ್ಯಾಲರಿಯಲ್ಲಿ ಆಗಸ್ಟ್‌ 15ರ ಒಳಗೆ ಶಿಲಾ ಸಮಾಧಿಗಳ ಛಾಯಾಚಿತ್ರಗಳ ಪ್ರದರ್ಶನ ಏರ್ಪಡಿಸಬೇಕು. ಬೆಟ್ಟದ ಸುತ್ತಲಿನ ಐದು ಕಿ.ಮೀ. ವ್ಯಾಪ್ತಿಯಲ್ಲಿ ಇನ್ನಷ್ಟು ಸಂಶೋಧನೆ ನಡೆಸಬೇಕು’ ಎಂದು ಕೇಂದ್ರ ಪುರಾತತ್ವ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ADVERTISEMENT

ಪರಮಾಣು ಸ್ಥಾವರ ಅಗತ್ಯವಿಲ್ಲ: ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಪರಮಾಣು ವಿದ್ಯುತ್ ಸ್ಥಾವರ ಸ್ಥಾಪನೆಯ ಅಗತ್ಯವಿಲ್ಲ ಎಂದು ಸಂಸದೀಯ ವ್ಯವಹಾರಗಳ ಖಾತೆ ಸಚಿವರೂ ಆದ ಎಚ್.ಕೆ. ಪಾಟೀಲ ಹೇಳಿದರು.

‘ಎನ್.ಟಿ.ಪಿ.ಸಿ. ಸಂಸ್ಥೆ ವಿಜಯಪುರ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ವಿದ್ಯುತ್ ಸ್ಥಾವರ ಸ್ಥಾಪನೆಗೆ ಗುರುತಿಸಿದ ಸಂಭಾವ್ಯ ಸ್ಥಳಗಳಲ್ಲಿ ಪ್ರಾಥಮಿಕ ಅಧ್ಯಯನ ನಡೆಸಲು ಅನುಮತಿ ನೀಡುವಂತೆ ಕೋರಿದೆ. ಇದಕ್ಕೆ ‌ನನ್ನ ಸಹಮತವಿಲ್ಲ. ಸಚಿವ ಸಂಪುಟದಲ್ಲಿ ಕೆಲವು ಸಚಿವರು ಈ ಕುರಿತು ಚರ್ಚಿಸಿದ್ದೇವೆ. ಯಾರಿಗೂ ಇದಕ್ಕೆ ಒಪ್ಪಿಗೆಯಿಲ್ಲ. ಇದರ ಬದಲು ಸೌರ ಶಕ್ತಿ ಅಥವಾ ಪವನ ಶಕ್ತಿ ಮೂಲಕ ವಿದ್ಯುತ್ ಉತ್ಪಾದನೆ ಮಾಡಲಿ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.