ಅಳವಂಡಿ: ‘ಯುವಜನರು ಕ್ರೀಡ್ರೆಗಳ ಮಹತ್ವ ಅರಿತು, ಅಭಿವೃದ್ಧಿ ಪಡಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಜತೆಗೆ ಕ್ರೀಡೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಬೇಕು’ ಎಂದು ಉದ್ಯಮಿ ರುದ್ರಗೌಡ ಪೋಲಿಸ್ ಪಾಟೀಲ ಹೇಳಿದರು.
ಸಮೀಪದ ತಿಗರಿ ಗ್ರಾಮದಲ್ಲಿ ಫ್ರೆಂಡ್ಸ್ ಕ್ರಿಕೆಟ್ ಕ್ಲಬ್ ವತಿಯಿಂದ ಆಯೋಜಿಸಿದ್ದ ತಿಗರಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು.
ಮುಖುಂಡ ಹೇಮರಡ್ಡಿ ನಾಗರಹಳ್ಳಿ ಮಾತನಾಡಿ, ‘ಕ್ರೀಡೆಯಿಂದ ಯುವಜನರಲ್ಲಿ ನಾಯಕತ್ವ ಗುಣ ಮತ್ತು ಕ್ರೀಡಾ ಮನೋಭಾವ ಬೆಳೆಸಲು ಉಪಯುಕ್ತವಾಗಿವೆ. ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯ ಪಾಲ್ಗೋಳ್ಳುವುದು ಮುಖ್ಯವಾಗಿದೆ’ ಎಂದರು.
ಪ್ರಮುಖರಾದ ಗಣೇಶ ಪೂಜಾರ, ಮಲ್ಲಪ್ಪ, ಸಂಗಮೇಶ್ವರ, ಮುದುಕಪ್ಪ, ಮಹೇಶ ಶೀಗನಹಳ್ಳಿ, ಮಂಜು ಅಂಗಡಿ, ವೆಂಕಟೇಶ ಕವಲೂರು, ವೀರೇಶ ಕುರಿ, ಶರಣು ಬಳಗೇರ, ಹನುಮೇಶ ಹಂಚಿನಾಳ, ಬಸವರಾಜ, ಶಿವು, ಪ್ರಕಾಶ್, ಪ್ರಸನ್ನ, ಹನುಮಗೌಡ, ರವಿ, ಅಭಿ, ಮಾರುತಿ ಹರಿಜನ, ಫಕೀರಪ್ಪ, ಶೇಖರಪ್ಪ ಅಗಸಿಮನಿ, ವೀರಭದ್ರಪ್ಪ ಕೋರಿ, ಸುರೇಶ, ಹನುಮಗೌಡ ಪೋಲಿಸ್ ಪಾಟೀಲ, ವೀರಭದ್ರಪ್ಪ ಹಡಪದ, ಪಕೀರಶೆಟ್ಟಿ, ರೈಮನ್ ಸಾಬ, ನಬೀಸಾಬ ಹಾಗೂ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.