ADVERTISEMENT

₹1 ಕೋಟಿ ಮೌಲ್ಯದ ಅಕ್ರಮ ಮದ್ಯವಶ

ಅಬಕಾರಿ ಇಲಾಖೆಯಿಂದ ಜಿಲ್ಲೆಯ ವಿವಿಧೆಡೆ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 5 ಜೂನ್ 2021, 6:01 IST
Last Updated 5 ಜೂನ್ 2021, 6:01 IST
ಲಾಕ್‌ಡೌನ್‌ ಕಾರಣ ಕೊಪ್ಪಳ ಜಿಲ್ಲೆಯ ವಿವಿಧೆಡೆ ಅಕ್ರಮ ಸಾರಾಯಿ ತಯಾರಿಕೆ ಘಟಕಗಳ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ಜಿಲ್ಲಾ ಆಯುಕ್ತೆ ಸಿ.ಸೆಲೀನಾ ನೇತೃತ್ವದಲ್ಲಿ ದಾಳಿ ಮಾಡಿ ಅವುಗಳನ್ನು ನಾಶಪಡಿಸಿದರು
ಲಾಕ್‌ಡೌನ್‌ ಕಾರಣ ಕೊಪ್ಪಳ ಜಿಲ್ಲೆಯ ವಿವಿಧೆಡೆ ಅಕ್ರಮ ಸಾರಾಯಿ ತಯಾರಿಕೆ ಘಟಕಗಳ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ಜಿಲ್ಲಾ ಆಯುಕ್ತೆ ಸಿ.ಸೆಲೀನಾ ನೇತೃತ್ವದಲ್ಲಿ ದಾಳಿ ಮಾಡಿ ಅವುಗಳನ್ನು ನಾಶಪಡಿಸಿದರು   

ಕೊಪ್ಪಳ: ‘ಜಿಲ್ಲೆಯಲ್ಲಿ ಏ.23 ರಿಂದ ಜೂ.3 ರವರೆಗೆ ₹1,40,86,197 ಮೌಲ್ಯದ ವಿವಿಧ ಮಾದರಿಯ ಅಬಕಾರಿ ವಸ್ತುಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಅಬಕಾರಿ ಉಪ ಆಯುಕ್ತೆ ಸಿ.ಸೇಲಿನಾ ತಿಳಿಸಿದ್ದಾರೆ.

ಅಬಕಾರಿ ಇಲಾಖೆಯಿಂದ ಜಿಲ್ಲೆಯಾದ್ಯಂತ 45 ಕಡೆಗಳಲ್ಲಿ ದಾಳಿ ಮಾಡಲಾಗಿದೆ. ಅವುಗಳಲ್ಲಿ 16 ಘೋರ, 7 ಬಿಎಲ್‌ಸಿ ಹಾಗೂ 15(ಎ) ಅಡಿ 24 ಸೇರಿದಂತೆ ಒಟ್ಟು 47 ಪ್ರಕರಣ ದಾಖಲಿಸಲಾಗಿದ್ದು, ಮೂವರನ್ನುಬಂಧಿಸಲಾಗಿದೆ. ದಾಳಿ ಸಂದರ್ಭ 8 ವಾಹನ, 15,069.390 ಲೀಟರ್ ಮದ್ಯ, 44.340 ಲೀಟರ್ ಬಿಯರ್, 5 ಲೀಟರ್ ಐಡಿ ಮತ್ತು 40,000 ಲೀಟರ್ ಮದ್ಯಸಾರ ಜಪ್ತಿ ಮಾಡಲಾಗಿದೆ. ಇವುಗಳ ಒಟ್ಟು ಮೌಲ್ಯ ₹1,40,86,197 ಆಗಿದೆ ಎಂದು ಅವರು ತಿಳಿಸಿದ್ದಾರೆ.

ಕೋವಿಡ್ ಕಾರಣ ಮೇ 17 ರಿಂದ ಜೂ 7 ರ ಮಧ್ಯರಾತ್ರಿ 12 ಗಂಟೆಯವರೆಗೆ ಜಿಲ್ಲೆಯಾದ್ಯಂತ ಜಿಲ್ಲಾಧಿಕಾರಿಗಳು ಮದ್ಯ ಮಾರಾಟ ಸೇರಿದಂತೆ ಎಲ್ಲ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಿದ್ದಾರೆ.

ADVERTISEMENT

ಲಾಕ್‌ಡೌನ್ ಅವಧಿಯಲ್ಲಿ ದೃಶ್ಯ ಮಾಧ್ಯಮ ಹಾಗೂ ಪತ್ರಿಕೆಗಳಲ್ಲಿ ಬಂದ ವರದಿ ಅನುಸಾರ ಗಂಗಾವತಿ ವಲಯದ 2 ಸಿಎಲ್-7 ಸನ್ನದುಗಳನ್ನು ಜಿಲ್ಲಾಧಿಕಾರಿಗಳ ಆದೇಶದನ್ವಯ ಮೇ 24 ರಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅಮಾನತುಗೊಳಿಸಲಾಗಿದೆ.

ಇಂಥ ಪ್ರಕರಣಗಳು ಕಂಡುಬಂದಲ್ಲಿ ಅಬಕಾರಿ ಉಪ ಆಯುಕ್ತರಾದ ಸಿ.ಸೇಲಿನಾ ಮೊ-9449597170, ಕೊಪ್ಪಳ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರಾದ (ಪ್ರಭಾರ) ಯಮನೂರಸಾಬ್ ಹೊಸಮನಿ ಮೊ- 9449597175, ಅಬಕಾರಿ ನಿರೀಕ್ಷಕರು ವಿಚಕ್ಷಣ ದಳದ ಸ್ವತಂತ್ರಕುಮಾರ ಮೊ- 9591795689, ಕೊಪ್ಪಳ ವಲಯದ ಅಬಕಾರಿ ನಿರೀಕ್ಷಕ ರಮೇಶ ಅಗಡಿ ಮೊ- 7675114929, ಗಂಗಾವತಿ ವಲಯದ ಅಬಕಾರಿ ನಿರೀಕ್ಷಕ ಅಜಯ್ ಉಮದಿ ಮೊ- 9740394078, ಕುಷ್ಟಗಿ ವಲಯದ ಅಬಕಾರಿ ನಿರೀಕ್ಷಕ ಚಾಂದಪಾಷಾ ಮೊ- 9845947828 ಅವರನ್ನು ಸಂಪರ್ಕಿಸಿ ಮಾಹಿತಿ ನೀಡಬೇಕು ಎಂದು ಅಬಕಾರಿ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.