ತಾವರಗೇರಾ: ಪಟ್ಟಣದ ಸಿಂಧನೂರು ರಸ್ತೆ ಬಳಿಯ ಸ.ನಂ 54/1ರ ಸರ್ಕಾರಿ ಗೈರಾಣು ಜಮೀನಿನಲ್ಲಿ ಖಾಸಗಿ ಕಂಪನಿಯವರು ಅಕ್ರಮವಾಗಿ ರಸ್ತೆ ನಿರ್ಮಿಸಿಕೊಂಡು ವಿಂಡ್ ಪವರ್ ಕಂಬಗಳ ನಿರ್ಮಾಣಕ್ಕೆ ಬೇಕಾಗುವ ರೆಕ್ಕೆಗಳನ್ನು ಸಾಗಿಸುತ್ತಿದ್ದಾರೆ ಎಂದು ಎಂದು ಸ್ಥಳಿಯರು ಆರೋಪಿಸಿದ್ದಾರೆ.
ಈ ಬಗ್ಗೆ ಸ್ಥಳೀಯರು ಸರ್ಕಾರಿ ಜಮೀನು ರಕ್ಷಣೆಗಾಗಿ ತಹಶೀಲ್ದಾರ್‌ಗೆ ದೂರು ನೀಡಿರುವ ಹಿನ್ನೆಲೆಯಲ್ಲಿ ಸೋಮವಾರ ಸಂಜೆ ಜೆಸಿಬಿ ಯಂತ್ರದ ಮೂಲಕ ಬೃಹತ್ ಲಾರಿಗಳು ಗೈರಾಣು ಜಮೀನಿನಲ್ಲಿ ಸಂಚರಿಸದಂತೆ ತಗ್ಗು ತೆಗೆಯಲಾಗಿದೆ.
‘ಸರ್ವೆ ಮಾಡಿ ಸರ್ಕಾರಿ ಜಮೀನು ರಕ್ಷಣೆಗೆ ಕ್ರಮ ಕೈಗೊಳ್ಳುತ್ತೇವೆ’ ಎಂದು ಕುಷ್ಟಗಿ ತಹಶೀಲ್ದಾರ್ ಅಶೋಕ ಶಿಗ್ಗಾವಿ ಪ್ರಜಾವಾಣಿಗೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.