ADVERTISEMENT

ಬ್ಯಾಂಕ್‌ ಗ್ರಾಹಕರ ಮಾಹಿತಿ ಶಿಬಿರ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2020, 10:17 IST
Last Updated 2 ಮಾರ್ಚ್ 2020, 10:17 IST
ತಾವರಗೇರಾ ಪಟ್ಟಣದ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ ಶನಿವಾರ ನಡೆದ ಕಿಸಾನ್ ಕ್ರೆಡಿಟ್ ಕಾರ್ಡ್‌ ಸಾಲ ಮಂಜೂರಾತಿ ಶಿಬಿರದಲ್ಲಿ ಫಲಾನುಭವಿ ರೈತ ಮಹಿಳೆಗೆ ಸಾಲ ಮಂಜೂರಾತಿ ಪತ್ರ ನೀಡಲಾಯಿತು
ತಾವರಗೇರಾ ಪಟ್ಟಣದ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ ಶನಿವಾರ ನಡೆದ ಕಿಸಾನ್ ಕ್ರೆಡಿಟ್ ಕಾರ್ಡ್‌ ಸಾಲ ಮಂಜೂರಾತಿ ಶಿಬಿರದಲ್ಲಿ ಫಲಾನುಭವಿ ರೈತ ಮಹಿಳೆಗೆ ಸಾಲ ಮಂಜೂರಾತಿ ಪತ್ರ ನೀಡಲಾಯಿತು   

ತಾವರಗೇರಾ: ಕಿಸಾನ್ ಸಮ್ಮಾನ ಯೋಜನೆ ಅಡಿಯಲ್ಲಿ ವಾರ್ಷಿಕವಾಗಿ ₹6 ಸಾವಿರ ಪಡೆಯುತ್ತಿರುವ ರೈತರಿಗೆ ಬ್ಯಾಂಕ್‌ನ ನಿಬಂಧನೆಗೊಳಪಟ್ಟು ಅರ್ಹತೆಗೆ ಅನುಗುಣವಾಗಿ ಕಿಸಾನ್ ಕಾರ್ಡ್‌ ಸಾಲ ಮಂಜೂರು ಮಾಡಲಾಗುವುದು ಎಂದು ಜ್ಞಾನಜ್ಯೋತಿ ಆರ್ಥಿಕ ಸಾಕ್ಷರತಾ ಕೇಂದ್ರದ ಸಮಾಲೋಚಕ ದೊಡ್ಡಪ್ಪ ಜ್ಯೋತಿ ಹೇಳಿದರು.

ಪಟ್ಟಣದ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ ಶನಿವಾರ ನಡೆದ ಗ್ರಾಹಕರ ಮಾಹಿತಿ ಶಿಬಿರದಲ್ಲಿ ಅವರು ಮಾತನಾಡಿದರು.

ರೈತರು ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ, ಸುರಕ್ಷಾ ಭೀಮಾ ಯೋಜನೆ, ಅಟಲ್ ಪಿಂಚಣಿ ಯೋಜನೆಗಳಿಗೆ ನೋಂದಾಯಿಸಿಕೊಳ್ಳಬೇಕು ಎಂದರು.

ADVERTISEMENT

ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯ ಕ್ರೆಡಿಟ್ ಕಾರ್ಡ್‌ ಸಾಲ ಮಂಜೂರಾತಿ ಪತ್ರ ನೀಡಲಾಯಿತು.

ಬ್ಯಾಂಕ್‌ನ ವ್ಯವಸ್ಥಾಪಕ ಚಂದ್ರಶೇಖರ ಮಾತನಾಡಿ,‘ಕೇಂದ್ರ ಸರ್ಕಾರದ ನೂತನ ಯೋಜನೆ ಜಾರಿಯಾಗಿದೆ. ಐದು ಎಕರೆಗಿಂತ ಕಡಿಮೆ ಭೂಮಿ ಇರುವ ರೈತರು ತಮ್ಮ ಪಹಣಿ ಮೇಲೆ ₹1 ಲಕ್ಷ 60 ಸಾವಿರವರೆಗೆ ಜಾಮೀನುದಾರರಿಲ್ಲದೆ ಸಾಲ ಪಡೆಯಬಹುದು. ಇದಕ್ಕೆ ಒಂದು ವರ್ಷಕ್ಕೆ ಕೇವಲ ₹4 ಸಾವಿರ ಬಡ್ಡಿ ಕಟ್ಟಬೇಕು ಎಂದು ಹೇಳಿದರು

ರಘುಪತಿ ಸಾಲ ಸೌಲಭ್ಯದ ಕುರಿತು ವಿವರಿಸಿದರು. ದೊಡ್ಡಬಸಪ್ಪ ಮತ್ತು ಬ್ಯಾಂಕ್‌ ವ್ಯವಹಾರ ಪ್ರತಿನಿಧಿ ಪಂಪಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.