ADVERTISEMENT

ಇನ್ನರ್‌ವೀಲ್ ಮಾದರಿ ಸಂಸ್ಥೆ- ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಮರೇಶ ಹುಬ್ಬಳ್ಳಿ

​ಪ್ರಜಾವಾಣಿ ವಾರ್ತೆ
Published 15 ಜನವರಿ 2022, 8:27 IST
Last Updated 15 ಜನವರಿ 2022, 8:27 IST
ಯಲಬುರ್ಗಾ ಪಟ್ಟಣದ ಈಶ್ವರಿ ವಿದ್ಯಾಲಯದಲ್ಲಿ ಶುಕ್ರವಾರ ಇನ್ನರ್‌ವೀಲ್ ಕ್ಲಬ್‍ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು
ಯಲಬುರ್ಗಾ ಪಟ್ಟಣದ ಈಶ್ವರಿ ವಿದ್ಯಾಲಯದಲ್ಲಿ ಶುಕ್ರವಾರ ಇನ್ನರ್‌ವೀಲ್ ಕ್ಲಬ್‍ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು   

ಯಲಬುರ್ಗಾ: ಸಮಾಜಮುಖಿ ಕೆಲಸ ಕಾರ್ಯಗಳಿಂದ ಜನಾನುರಾಗಿಯಾಗಿರುವ ಇನ್ನರ್‌ವೀಲ್ ಕ್ಲಬ್ ಮಾದರಿ ಸಂಸ್ಥೆಯಾಗಿ ಗುರುತಿಸಲ್ಪಟ್ಟಿದೆ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಮರೇಶ ಹುಬ್ಬಳ್ಳಿ ಅಭಿಪ್ರಾಯಪಟ್ಟರು.

ಪಟ್ಟಣದ ಈಶ್ವರಿ ವಿದ್ಯಾಲಯದಲ್ಲಿ ಶುಕ್ರವಾರ ಸಂಸ್ಥೆಯ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೋವಿಡ್ ಸಂದರ್ಭದಲ್ಲಿ ವಿವಿಧ ರೀತಿಯ ಸಹಾಯ, ಆರೋಗ್ಯ ತಪಾಸಣೆ, ಮಹಿಳೆಯರ ಸಬಲೀಕರಣಕ್ಕೆ ವಿವಿಧ ಕಾರ್ಯಕ್ರಮಗಳ ಆಯೋಜನೆ ಹಾಗೂ ಇನ್ನಿತರ ರಚನಾತ್ಮಕ ಕಾರ್ಯ ಚಟುವಟಿಕೆಯಿಂದ ಉತ್ತಮ ಸ್ಥಾನಮಾನದಲ್ಲಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕೆಲಸ ಮಾಡಲಿ ಎಂದು ಹೇಳಿದರು.

ADVERTISEMENT

ಜಿ.ಪಂ.ಮಾಜಿ ಸದಸ್ಯೆ ಶಕುಂತಲಾದೇವಿ ಮಾಲಿಪಾಟೀಲ ಮಾತನಾಡಿ, ಇನ್ನರ್‌ವೀಲ್ ಕ್ಲಬಿನ ಮಹಿಳೆಯರು ಇಲ್ಲಿಯ ಹತ್ತು ಹಲವಾರು ಸಾಮಾಜಿಕ ಕಾರ್ಯ ಮಾಡುವ ಮೂಲಕ ಹೆಸರು ಮಾಡಿದ್ದು ಖುಷಿಯ ಸಂಗತಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಕ್ಲಬ್‍ನ ಅಧ್ಯಕ್ಷೆ ಜ್ಯೋತಿ ಪಲ್ಲೇದ, ಪ್ರತಿಯೊಂದು ಕೆಲಸ ಕಾರ್ಯಗಳ ಯಶಸ್ವಿಗೆ ಸದಸ್ಯರ ಮತ್ತು ಜನರ ಪ್ರೋತ್ಸಾಹವೇ ಕಾರಣ ಎಂದರು.

ಈಶ್ವರಿ ಮಹಾ ವಿದ್ಯಾಲಯದ ಉಮಾ ಮಾತನಾಡಿದರು. ಪ.ಪಂ.ಸದಸ್ಯ ಕಳಕಪ್ಪ ತಳವಾರ, ಮಾಜಿ ಸದಸ್ಯ ಸಿದ್ರಾಮೇಶ ಬೇಲೇರಿ, ಅಂಗನವಾಡಿ ಮೇಲ್ವಿಚಾರಕಿ ಲಲಿತಾ ನಾಯಕ, ಮಾಧುವಿ ಜೋಷಿ, ಲತಾ ಕಲ್ಯಾಣಿ, ಸಿದ್ದಯ್ಯ ಕೊಣ್ಣೂರು, ಶಾರದಾ ಕಣ್ಣೂರು, ಶಿವಕುಮಾರ ಸರಗಣಾಚಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.