ADVERTISEMENT

ಡಿ.14ರಿಂದ ವಸುಂಧರಾ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2021, 1:32 IST
Last Updated 26 ನವೆಂಬರ್ 2021, 1:32 IST
‘ವಸುಂಧರಾ ಅಂತರ ರಾಷ್ಟ್ರೀಯ ಚಲನ ಚಿತ್ರೋತ್ಸವ -2021’ ಕಾರ್ಯಕ್ರಮದ ಅಂಗವಾಗಿ ಲಾಂಛನ ಮತ್ತು ಭಿತ್ತಿಪತ್ರವನ್ನು ಕಂಪನಿ ಎಂಡಿ ಡಾ.ಆರ್.ವಿ.ಗುಮಾಸ್ತೆ ಬಿಡುಗಡೆ ಮಾಡಿದರು. ಉಪಾಧ್ಯಕ್ಷ ಪಿ.ನಾರಾಯಣ್ ಇದ್ದರು
‘ವಸುಂಧರಾ ಅಂತರ ರಾಷ್ಟ್ರೀಯ ಚಲನ ಚಿತ್ರೋತ್ಸವ -2021’ ಕಾರ್ಯಕ್ರಮದ ಅಂಗವಾಗಿ ಲಾಂಛನ ಮತ್ತು ಭಿತ್ತಿಪತ್ರವನ್ನು ಕಂಪನಿ ಎಂಡಿ ಡಾ.ಆರ್.ವಿ.ಗುಮಾಸ್ತೆ ಬಿಡುಗಡೆ ಮಾಡಿದರು. ಉಪಾಧ್ಯಕ್ಷ ಪಿ.ನಾರಾಯಣ್ ಇದ್ದರು   

ಕೊಪ್ಪಳ: ಕಿರ್ಲೋಸ್ಕರ್ ಮತ್ತು ವಸುಂಧರಾ ಕ್ಲಬ್ ಆಶ್ರಯದಲ್ಲಿ ವಸುಂಧರಾ ಅಂತರರಾಷ್ಟ್ರೀಯಚಲನ ಚಿತ್ರೋತ್ಸವ ಡಿ.14ರಿಂದ 17ರವರೆಗೆ ವಿವಿಧ ರಾಜ್ಯಗಳ 30 ನಗರಗಳಲ್ಲಿ ಆಯೋಜಿಸಲಾಗುತ್ತಿದೆ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಆರ್.ವಿ.ಗುಮಾಸ್ತೆ ತಿಳಿಸಿದರು.

ಸಮೀಪದ ಹೊಸಳ್ಳಿ ಬಳಿ ಇರುವ ಕಿರ್ಲೋಸ್ಕರ್ ಕಾರ್ಖಾನೆಯಲ್ಲಿ ಲಾಂಛನ ಮತ್ತು ಭಿತ್ತಿ ಪತ್ರ ಬಿಡುಗಡೆ ಮಾಡಿ ಮಾತನಾಡಿದರು.

ಇದೇ ಮೊದಲ ಬಾರಿಗೆ 30 ನಗರಗಳಲ್ಲಿ ಆನ್‍ಲೈನ್ ಮೂಲಕ ಈ ಚಲನ ಚಿತ್ರೋತ್ಸವವು ಆಯೋಜಿಸಲಾಗುತ್ತಿದೆ ಎಂದರು.

ADVERTISEMENT

ಚಿತ್ರೋತ್ಸವದ ವಿಶೇಷ:ಈ ಕಾರ್ಯಕ್ರಮದ ಮುಖ್ಯ ಸಂದೇಶ-ಪೌಷ್ಟಿಕ ಆಹಾರ, ಪ್ರವರ್ಧಮಾನಕ್ಕೆ ಬರುವ ಪ್ರಕೃತಿ ಮತ್ತು ಆರೋಗ್ಯಕರ ಸಮಾಜ ನಿರ್ಮಾಣ ಎಂಬ ವಿಷಯದ ಮೇಲೆ ಈ ವರ್ಷ ಬೆಳಕು ಚೆಲ್ಲುವುದಾಗಿದೆ.

ಪ್ರಕೃತಿಯ ಪ್ರವರ್ಧಮಾನ, ರೋಗ ನಿರೋಧಕ ಶಕ್ತಿ ಮತ್ತು ನಾವು ಸೇವಿಸುವ ದಿನನಿತ್ಯದ ಆಹಾರ ಪದ್ಧತಿ ಕುರಿತು ಚಿತ್ರಗಳು ಮೂಡಿ ಬರಲಿವೆ. ಪ್ರತಿ ದಿನ ಬೆಳಿಗ್ಗೆ 11 ರಿಂದ ಮಧ್ಯಾಹ್ನ 3.30 ರವರೆಗೆ ಪ್ರಸಾರವಾಗಲಿದೆ ಮತ್ತು ಮರು ಪ್ರಸಾರವನ್ನು ಪ್ರತಿ ದಿನ ಸಂಜೆ 6 ರಿಂದ ರಾತ್ರಿ 10.30 ರವರೆಗೆ ಪ್ರಸಾರಗೊಳ್ಳಲಿದೆ.

ನುರಿತ ತಜ್ಞರಜೊತೆ ಮಾತುಕತೆ,ಛಾಯಾಚಿತ್ರ ಪ್ರದರ್ಶನ, ಐವರಿಗೆ ‘ವಸುಂಧರಾ’ ಗೌರವ ಪ್ರಶಸ್ತಿ, ಕಾರ್ಯಾಗಾರ, ಚರ್ಚೆಗಳು ಮತ್ತು ಆಡಿಯೊ ಮೂಲಕ ಉಪನ್ಯಾಸ, ಅಂತರರಾಷ್ಟ್ರೀಯ ಆಯ್ದ ಚಲನ ಚಿತ್ರಗಳು ಮತ್ತು ಸಮಾರೋಪ ಸಮಾರಂಭ ನಡೆಯಲಿವೆ.

ಡಾ.ಗುರುದಾಸ್ ನೂಲ್ಕರ್, ಡಾ.ರಾಜಶ್ರೀ ಜೋಶಿ, ಸ್ವಪ್ನಿಲ್ ಕುಂಭೋಜಕರ್, ಆರತಿ ಕುಲಕರ್ಣಿ, ಡಾ.ಮಂದಾರ ದಾತಾರ್, ಅನಿರುದ್ಧ ಚಾವೋಜಿ, ಡಾ.ಪ್ರಿಯದರ್ಶಿನಿ ಕಾರ್ವೆ ಅವರ ಮಾರ್ಗದರ್ಶನದಲ್ಲಿ ಕೆವಿಐಎಫ್‍ಎಫ್ ಸುಮಾರು 70 ಹೊಸ ಚಲನಚಿತ್ರಗಳನ್ನು ತಯಾರಿಸಿರುತ್ತಾರೆ. ಈ ನಾಲ್ಕು ದಿನಗಳ ಚಲನಚಿತ್ರೋತ್ಸವಕ್ಕೆ ಉಚಿತ ನೋಂದಣಿ ಮಾಡುವುದರ ಮಾಲಕ ಪ್ರವೇಶವಿರುತ್ತದೆ. ಪಾಲ್ಗೊಳ್ಳಲು ಇಚ್ಚಿಸುವವರು ಈ ಕೆಳಗಿನ ಲಿಂಕ್‍ಗಳನ್ನು ಬಳಸಿ ನೋಂದಾಯಿಸಿಕೊಂಡು ಭಾಗವಹಿಸಬಹುದಾಗಿದೆ. ಕಂಪನಿಯ ಹಿರಿಯ ಉಪಾಧ್ಯಕ್ಷಪಿ.ನಾರಾಯಣ ಇದ್ದರು.

Registration Link : https://bit.ly/kviff2021,facebook.com/kirloskarvasundharafilmfest, Websit: https://kirloskarvasu ndharafest.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.