ADVERTISEMENT

ಕನಕದಾಸರ ವಿಚಾರಧಾರೆ ಸಾರ್ವಕಾಲಿಕ: ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2021, 14:11 IST
Last Updated 22 ನವೆಂಬರ್ 2021, 14:11 IST
ಯಲಬುರ್ಗಾ ಪಟ್ಟಣದ ಕನಕದಾಸ ವೃತ್ತದ ಬಳಿ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ ಕನಕದಾಸ ಮೂರ್ತಿಗೆ ಗೌರವ ಸಲ್ಲಿಸಿ ಮಾತನಾಡಿದರು
ಯಲಬುರ್ಗಾ ಪಟ್ಟಣದ ಕನಕದಾಸ ವೃತ್ತದ ಬಳಿ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ ಕನಕದಾಸ ಮೂರ್ತಿಗೆ ಗೌರವ ಸಲ್ಲಿಸಿ ಮಾತನಾಡಿದರು   

ಯಲಬುರ್ಗಾ: ‘ದಾಸ ಸಾಹಿತ್ಯದ ಮೂಲಕ ಸಮಾಜ ಸುಧಾರಕರಾಗಿ, ಸರ್ವರೂ ಒಂದೇ ಎಂದು ಸಾರಿದ ಕನಕದಾಸರ ವಿಚಾರಗಳು ಸಾರ್ವಕಾಲಿಕ. ಅವರ ನಡೆ–ನುಡಿಗಳು ನಮಗೆ ದಾರಿದೀಪವಾಗಬೇಕಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ ತಿಳಿಸಿದರು.

ಕನಕದಾಸ ಜಯಂತಿ ಪ್ರಯುಕ್ತ ಪಟ್ಟಣದಲ್ಲಿ ಕನಕದಾಸ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರು.

ಒಂದು ಜಾತಿಗೆ ಅಥವಾ ಧರ್ಮಕ್ಕೆ ಸೀಮಿತಗೊಳ್ಳದ ಕನಕದಾಸರ ವ್ಯಕ್ತಿತ್ವವನ್ನು ಪ್ರತಿಯೊಬ್ಬರೂ ಅನುಸರಿಸಿಕೊಂಡು ಬದುಕು ಕಟ್ಟಿಕೊಂಡರೆ ಮಾದರಿ ಜೀವನ ನಡೆಸಲು ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.

ADVERTISEMENT

ಹಾಲುಮತ ಸಮಾಜದ ಮುಖಂಡ ವೀರನಗೌಡ ಪೊಲೀಸ್‍ ಪಾಟೀಲ, ಗಣ್ಯರಾದ ಬಸಲಿಂಗಪ್ಪ ಭೂತೆ, ಸಿ.ಎಚ್.ಪೊಲೀಸ್‍ ಪಾಟೀಲ, ಕಳಕಪ್ಪ ಕಂಬಳಿ, ವೀರಣ್ಣ ಹುಬ್ಬಳ್ಳಿ, ಬಸವರಾಜ ಉಳ್ಳಾಗಡ್ಡಿ, ಕೆರಿಬಸಪ್ಪ ನಿಡಗುಂದಿ, ಪಟ್ಟಣ ಪಂಚಾಯಿತಿ ಸದಸ್ಯ ರೇವಣಪ್ಪ ಹಿರೇಕುರುಬರ, ಸ್ಥಾಯಿ ಸಮಿತಿ ಅಧ್ಯಕ್ಷ ವಸಂತ, ಉಪಾಧ್ಯಕ್ಷೆ ಶಾಂತಾ ಮಾಟೂರ, ದೊಡ್ಡಯ್ಯ ಗುರುವಿನ, ಪ್ರಾಚಾರ್ಯ ಶಿವರಾಜ ಗುರಿಕಾರ, ಶಿವು ರಾಜೂರ, ಈಶ್ವರ ಅಟಮಾಳಗಿ, ಬಸವರಾಜ ಒಂಟೆಲಿ, ಹನಮಂತಪ್ಪ ಹನಮಾಪುರ ಹಾಗೂ ರಾಮಣ್ಣ ಸಾಲಭಾವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.