
ಕನಕಗಿರಿ: ಗಂಗಾವತಿಯ ಉಪ್ಪಿನಮಾಳಿ ಕ್ಯಾಂಪ್‌ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ವೆಂಕಟಲಕ್ಷ್ಮೀ ಬೆಲ್ಲದ ಅವರು ಸೇವಾ ನಿವೃತ್ತಿಗೊಂಡಿದ್ದರೂ, ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ಮುಖ್ಯಶಿಕ್ಷಕ ಹುದ್ದೆಗೆ ಬಡ್ತಿ ಸಿಕ್ಕಿದೆ.
ನೀಲಕಂಠೇಶ್ವರ ವೃತ್ತದ ಶಾಲೆ, ವೆಂಕಟಗಿರಿ ಶಾಲೆ ಹಾಗೂ ಉಪ್ಪಿನಮಾಳಿ ಕ್ಯಾಂಪ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ಅವರು ಉಪ್ಪಿನಮಾಳಿ ಕ್ಯಾಂಪ್ ಶಾಲೆಯಲ್ಲಿ ಜ.21ರಂದು ನಿವೃತ್ತರಾಗಿದ್ದರು. ಕೆಸಿಎಸ್‌ಆರ್
ನಿಯಮದ ಪ್ರಕಾರ ಜ.21ಕ್ಕೆ ನಿವೃತ್ತಿಗೊಂಡಿದ್ದರೂ ಜ.31ರ ವರೆಗೆ ಸೇವೆ ಸಲ್ಲಿಸಬೇಕು.
ಅದೃಷ್ಟ ಎಂಬಂತೆ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇದ್ದ ಹಿರಿಯ ಮುಖ್ಯಶಿಕ್ಷಕ ಹುದ್ದೆಗಳಿಗೆ ಶನಿವಾರ ಕೌನ್ಸಿಲಿಂಗ್ ನಡೆದಿದ್ದು ತಾಲ್ಲೂಕಿನ ಸುಳೇಕಲ್ ಗ್ರಾಮದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯನ್ನು ವೆಂಕಟಲಕ್ಷ್ಮೀ ಅವರು ಆಯ್ಕೆ ಮಾಡಿಕೊಂಡು ಮತ್ತೊಂದು ವೇತನ ಬಡ್ತಿ ಪಡೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.