ADVERTISEMENT

ಕನಕಗಿರಿ: ಅನಧಿಕೃತ ಶೆಡ್‌ಗಳ ತೆರವುಗೊಳಿಸಿದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

​ಪ್ರಜಾವಾಣಿ ವಾರ್ತೆ
Published 14 ಜನವರಿ 2026, 5:46 IST
Last Updated 14 ಜನವರಿ 2026, 5:46 IST
ಕನಕಗಿರಿಯ ಎಪಿಎಂಸಿಯ ಹೊರಗೋಡೆಗೆ ಹೊಂದಿಕೊಂಡ  ಜಾಗದಲ್ಲಿ ಅನಧಿಕೃತವಾಗಿ ಹಾಕಿಕೊಳ್ಳುತ್ತಿದ್ದ ಶೆಡ್‌ಗಳನ್ನು ಪಟ್ಟಣ‌ ಪಂಚಾಯಿತಿ ಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ‌ ಅವರು ತೆರವುಗೊಳಿಸಿದರು
ಕನಕಗಿರಿಯ ಎಪಿಎಂಸಿಯ ಹೊರಗೋಡೆಗೆ ಹೊಂದಿಕೊಂಡ  ಜಾಗದಲ್ಲಿ ಅನಧಿಕೃತವಾಗಿ ಹಾಕಿಕೊಳ್ಳುತ್ತಿದ್ದ ಶೆಡ್‌ಗಳನ್ನು ಪಟ್ಟಣ‌ ಪಂಚಾಯಿತಿ ಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ‌ ಅವರು ತೆರವುಗೊಳಿಸಿದರು   

ಕನಕಗಿರಿ: ಇಲ್ಲಿನ ಎಪಿಎಂಸಿ ಹೊರಗೋಡೆಗೆ ಹೊಂದಿಕೊಂಡು ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಶೆಡ್ ನಿರ್ಮಾಣ ಮಾಡುತ್ತಿರುವುದನ್ನು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ ಅವರು ಸೋಮವಾರ ತೆರವುಗೊಳಿಸಿದರು.

ಈ ಸಮಯದಲ್ಲಿ ಶೆಡ್ ನಿರ್ಮಾಣ ಮಾಡುವವರು ಹಾಗೂ ಪಟ್ಟಣ‌ ಪಂಚಾಯಿತಿ ಅಧಿಕಾರಿಗಳ ಮಧ್ಯೆ ವಾಗ್ವಾದ ನಡೆಯಿತು. ಎಪಿಎಂಸಿಗೆ ಹೊಂದಿಕೊಂಡಿರುವ ಇತರೆ ಗೂಡಂಗಡಿ ಹಾಗೂ ಶೆಡ್‌ಗಳನ್ನು ತೆರವುಗೊಳಿಸುವಂತೆ ಅವರು ಆಗ್ರಹಿಸಿದರು.

ಜೆಸಿಬಿ ಹಾಗೂ ಪಟ್ಟಣ ಪಂಚಾಯಿತಿ ಕಚೇರಿ ಸಿಬ್ಬಂದಿ ಸಹಾಯದಿಂದ ತೆರವು ಮಾಡಿದರು. ಹತ್ತಕ್ಕೂ ಹೆಚ್ಚು ಸಿಮೆಂಟ್ ಕಂಬಗಳನ್ನು ಕಿತ್ತು ಹಾಕಲಾಯಿತು. ನಂತರ ಇತರೆ ಕಂಬಗಳನ್ನು ತಾವೇ ತೆಗೆದುಕೊಳ್ಳುತ್ತೇವೆ ಸಮಯ‌ ನೀಡಿ ಎಂದು ವಿನಂತಿಸಿಕೊಂಡರು.

ADVERTISEMENT

ಪಟ್ಟಣ ಪಂಚಾಯಿತಿ‌ ಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ ಮಾತನಾಡಿ, ‘ಜಿಲ್ಲಾಧಿಕಾರಿ, ‌ಯೋಜನಾ ನಿರ್ದೇಶಕರ ನಿರ್ದೇಶನದಂತೆ ಅನಧಿಕೃತ ಶೆಡ್ ತೆರವುಗೊಳಿಸಲು ಕಾರ್ಯಾಚರಣೆ ಮಾಡಲಾಗುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.